Webdunia - Bharat's app for daily news and videos

Install App

ಕೋಟಿ ಕೋಟಿ ರೂಪಾಯಿ ವಾರಸುದಾರರೇ ಇಲ್ಲದೆ ಕೊಳೆಯುತ್ತಿದೆ..!

Webdunia
ಭಾನುವಾರ, 24 ನವೆಂಬರ್ 2013 (13:10 IST)
PTI
PTI
ಇಲ್ಲಿರುವ ಕೋಟಿ ಕೋಟಿ ಹಣಕ್ಕೆ ವಾರಸುದಾರರೇ ಇಲ್ಲ. ಬ್ಯಾಂಕಿನ ಖಾತೆಯನ್ನು ತೆಗೆದು ಅದರಲ್ಲಿ ಹಣವನ್ನು ಇಟ್ಟ ಅದೆಷ್ಟೋ ಜನರು ಮತ್ತೆ ಆ ಹಣದ ಬಗ್ಗೆ ಚಿಂತೆಯೇ ಮಾಡದೇ ಸುಮ್ಮನಾಗಿಬಿಟ್ಟಿದ್ದಾರೆ..! ಹೀಗೆ ವಾರಸುದಾರರೇ ಇಲ್ಲದ ಕೋಟಿ ಕೋಟಿ ಹಣದ ಮಾಹಿತಿ ಇದೀಗ ಲಭ್ಯವಾಗಿದ್ದು, ಸುಮಾರು 8 ರಿಂದ 10 ವರ್ಷಗಳಿಂದ ಈ ಕೋಟಿ ಕೋಟಿ ಹಣ ಬ್ಯಾಂಕಿನಲ್ಲಿಯೇ ಕೊಳೆಯುತ್ತಿದೆ. ಆದ್ರೆ ಆ ಹವಾಲಾ ಹಣಕ್ಕೆ ವಾರಸುದಾರರು ಯಾರು?

ಸದ್ಯದ ಮಾಹಿತಿಯ ಮೇರೆಗೆ ದೇಶಾದ್ಯಂತ 3,625 ಕೋಟಿ ರೂಪಾಯಿಗಳು ಬ್ಯಾಂಕಿನಲ್ಲಿ ವಾರಸುದಾರರ ಪತ್ತೆಯೇ ಇಲ್ಲದೇ ಕೊಳೆಯುತ್ತಿದೆ. ಈ ಖಾತೆಗಳು ಚಾಲನೆಯಲ್ಲಿ ಇಲ್ಲದೇ ಇದ್ದುದರಿಂದ ವಾರಸುದಾರರಿಲ್ಲ ಎಂದು ಗುರ್ತಿಸಿ ಈ ಹಣವನ್ನು ವಾರಸುದಾರರಿಲ್ಲದ ಖಾತೆಗೆ ವರ್ಗಾಯಿಸಲಾಗುತ್ತಿದೆ.

ಯಾವ ಯಾವ ಬ್ಯಾಂಕಿನಲ್ಲಿ ಎಷ್ಟು ಕೋಟಿ? ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ..

PTI
PTI
ಯಾವ ಯಾವ ಬ್ಯಾಂಕಿನಲ್ಲಿ ಎಷ್ಟು ಕೋಟಿ?

೧. ವಾರಸುದಾರರಿಲ್ಲದೇ ಕೊಳೆಯುತ್ತಿರುವ ಹಣ ಎಸ್‌ಬಿಐ ಬ್ಯಾಂಕಿನಲ್ಲಿಯೇ ಹೆಚ್ಚು - ಇಲ್ಲಿರುವ ಸುಮಾರು 714 ಕೋಟಿ ರೂಪಾಯಿಗಳಿಗೆ ವಾರಸುದಾರರೇ ಇಲ್ಲ.

೨. ಕೆನರಾ ಬ್ಯಾಂಕ್‌ ನಲ್ಲಿದೆ 525 ಕೋಟಿ ರೂಪಾಯಿಗಳು

ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಅತಿ ಹೆಚ್ಚು ಜನರು, ತಮ್ಮ ಖಾತೆಗಳಲ್ಲಿ ಹಣ ಡೆಪಾಸಿಟ್ ಮಾಡಿ ನಂತರ ಸುಮ್ಮನಾಗಿಬಿಟ್ಟಿದ್ದಾರೆ. ಆ ಖಾತೆಯನ್ನು ಮತ್ತೆ ಉಪಯೋಗಿಸಿಯೇ ಇಲ್ಲ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

2011 ರ ಬಳಿಕ ವಾರಸುದಾರರಿಲ್ಲದ ಹಣದ ಪ್ರಮಾಣ 1 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ, ಬ್ಯಾಂಕ್‌ ಖಾತೆಯನ್ನು ನಿರ್ವಹಿಸದೇ ಇದ್ದಲ್ಲಿ, ಅದನ್ನು ಚಾಲ್ತಿಯಲ್ಲಿಲ್ಲದ ಖಾತೆ ಎಂದು ಪರಿಗಣಿಸಲಾಗುತ್ತದೆ. ಆ ಬಳಿಕ 8 ವರ್ಷಗಳ ಕಾಲದ ಬಳಿಕವೂ, ನಿರ್ವಹಿಸದಿದ್ದರೆ, ಅವುಗಳಲ್ಲಿರುವ ಹಣ ಮತ್ತು ಬಡ್ಡಿ ಹಣವನ್ನು ವಾರಸುದಾರರಿಲ್ಲದ ಹಣ ಎಂದು ಗುರುತಿಸಿ 'ವಾರಸುದಾರರಿಲ್ಲದ ಠೇವಣಿ ಖಾತೆ'ಗೆ ವರ್ಗಾಯಿಸಲಾಗುತ್ತದೆ.

ಒಂದು ವೇಳೆ ಈ ಹಣವನ್ನು ಮರಳಿ ಪಡೆಯಬೇಕೆಂದರೆ 'ನೋ ಯುವರ್‌ ಕಸ್ಟಮರ್‌' ಫಾರಂ ತುಂಬಿ, ವಿಳಾಸ, ಗುರುತು ದೃಢೀಕರಣ ಮತ್ತು ಇತರ ದಾಖಲೆಗಳನ್ನು ಕೊಟ್ಟು ಮರಳಿ ಪಡೆಯಬಹುದಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments