Select Your Language

Notifications

webdunia
webdunia
webdunia
webdunia

ಕೇವಲ ಕಾನೂನು ಜಾರಿಯಿಂದ ಬಡತನ ನಿರ್ಮೂಲನೆಯಾಗುವುದಿಲ್ಲ: ಸೋನಿಯಾಗೆ ಮೋದಿ ತಿರುಗೇಟು

ಕೇವಲ ಕಾನೂನು ಜಾರಿಯಿಂದ ಬಡತನ ನಿರ್ಮೂಲನೆಯಾಗುವುದಿಲ್ಲ: ಸೋನಿಯಾಗೆ ಮೋದಿ ತಿರುಗೇಟು
ಸಿಕರ್ , ಶುಕ್ರವಾರ, 29 ನವೆಂಬರ್ 2013 (13:14 IST)
PTI
ಕಾನೂನುಗಳಿಂದ ಮಾತ್ರ ಬಡತನ ನಿರ್ಮೂಲನೇ ಸಾಧ್ಯವಿಲ್ಲ. ಯುಪಿಎ ಸರಕಾರ ತನ್ನ ಅಧಿಕಾರವಧಿಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ.ದೇಶವನ್ನು ವಿನಾಶದ ಅಂಚಿಗೆ ತಳ್ಳಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಚುನಾವಣೆ ಪ್ರಚಾರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಬಡವರ ಪರ ಯೋಜನೆಗಳನ್ನು ಜಾರಿ ಮಾಡಿದ್ದಾಗಿ ಹೇಳುತ್ತಾರೆ. ಆದರೆ, ಯೋಜನೆಗಳು ಬಡವರಿಗೆ ತಲುಪದಿದ್ದಲ್ಲಿ ಯಾವ ಪ್ರಯೋಜನ ಎಂದು ಟೀಕಿಸಿದ್ದಾರೆ.

ಬಡವರನ್ನು ಅಕ್ಷರಸ್ಥರನ್ನಾಗಿಸಬೇಕು ಎನ್ನುವ ಕಾಳಜಿಯಿಂದ ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ, ಕಾಂಗ್ರೆಸ್ ಸರಕಾರ ಸಂವಿಧಾನ ಬದ್ಧ ಕರ್ತವ್ಯಗಳು ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗಿದೆ. ಕಾಂಗ್ರೆಸ್‌ನ 60 ವರ್ಷಗಳ ಅವಧಿ ದೇಶವನ್ನು ಅಧೋಗತಿಗೆ ಇಳಿಸಿದೆ ಎಂದು ಕಿಡಿಕಾರಿದರು.

ಒಂದು ವೇಳೆ ಸಿಂಹ ಎದುರಾದಲ್ಲಿ ಗನ್ ತೋರಿಸುವ ಬದಲು ಗನ್ ಲೈಸೆನ್ಸ್ ತೋರಿಸಿದರೆ ಬೆದರಿ ಹೋಗುತ್ತದೆಯೇ ಅದರಂತೆ, ಬಡವರಿಗಾಗಿ ಕೇವಲ ಕಾನೂನು ಜಾರಿ ಮಾಡಿದರೆ ಸಾಲದು ಅವುಗಳ ಜಾರಿಗೆ ಅತಿ ಮುಖ್ಯ ಎಂದು ತಿರುಗೇಟು ನೀಡಿದರು.

ಹಲವಾರು ರೈಲ್ವೆ ನಿಲ್ದಾಣಗಳಲ್ಲಿರುವ ಗೋದಾಮುಗಳಲ್ಲಿ ಧವಸ ಧಾನ್ಯ ಕೊಳೆಯುತ್ತಿರುವಾಗ ಬಡವರಿಗೆ ಹಂಚಿ ಎನ್ನುವ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದೇ ಬಡವರಿಗೆ ಯುಪಿಎ ಸರಕಾರ ಅನ್ಯಾಯವೆಸಗಿತು ಎಂದು ಬಿಜೆಪಿ ಪ್ರದಾನಿ ಅಭ್ಯರ್ಥಿ ನರೇಂದ್ರ ಮೋದಿ ಕಿಡಿಕಾರಿದರು.

Share this Story:

Follow Webdunia kannada