Select Your Language

Notifications

webdunia
webdunia
webdunia
webdunia

ಕೇರಳ: ಕೊಲ್ಡ್ ಡ್ರಿಂಕ್ಸ್‌ನಲ್ಲಿ ಸತ್ತ ಹಾವೊಂದು ಪತ್ತೆಯಾದಾಗ

ಕೇರಳ: ಕೊಲ್ಡ್ ಡ್ರಿಂಕ್ಸ್‌ನಲ್ಲಿ ಸತ್ತ ಹಾವೊಂದು ಪತ್ತೆಯಾದಾಗ
ತಿರುವನಂತಪುರಂ , ಸೋಮವಾರ, 23 ಸೆಪ್ಟಂಬರ್ 2013 (13:42 IST)
PR
ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದ ಕಂಪೆನಿಯ ಕೊಲ್ಡ್ ಡ್ರಿಂಕ್ಸ್‌ನಲ್ಲಿ ಸತ್ತ ಹಾವೊಂದು ಪತ್ತೆಯಾದ ವಿಚಿತ್ರ ಘಟನೆ ವರದಿಯಾಗಿದೆ.

ತಂದೆ ಸಜೀವ್ ತನ್ನ ಎರಡುವರೆ ವರ್ಷದ ಪುತ್ರಿಗೆ ಕುಡಿಯಲು ಕೋಲ್ಡ್ ಡ್ರಿಂಕ್ಸ್ ತಂದುಕೊಟ್ಟಿದ್ದಾನೆ. ಬಾಲಕಿ ಎರಡು ಗುಟುಕು ಸೇವಿಸಿದ ನಂತರ ಬಾಟಲಿಯಲ್ಲಿ ಸತ್ತ ಹಾವು ಕಾಣಿಸಿಕೊಂಡಿದೆ. ಕೊಲ್ಡ್ ಡ್ರಿಂಕ್ಸ್ ಸೇವಿಸಿದ ನಂತರ ಬಾಲಕಿ ಅಸ್ವಸ್ಥಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಜೀವ್ ಪೊಲೀಸ್ ಠಾಣೆಯಲ್ಲಿ ದೂರು ಜಾಖಲಿಸಿ, ತನ್ನ ಪುತ್ರಿ ಕೊಲ್ಡ್ ಡ್ರಿಂಕ್ಸ್‌ನ್ನು ಸಂಪೂರ್ಣವಾಗಿ ಸೇವಿಸಿದ ನಂತರ ಗಟ್ಟಿಯಾದ ವಸ್ತುವೊಂದು ಪತ್ತೆಯಾಗಿದೆ. ನಂತರ ಅದನ್ನು ಸತ್ತ ಹಾವು ಎಂದು ಗುರುತಿಸಿರುವುದಾಗಿ ತಿಳಿಸಿದ್ದಾರೆ.

ಬಾಲಕಿಯ ತಂದೆ ಸಜೀವ್ ಅವರ ದೂರಿನನ್ವಯ ಪೊಲೀಸರು ಕೊಲ್ಡ್ ಡ್ರಿಂಕ್ಸ್ ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಬಾಟಲಿಯ ಮೇಲೆ ಎಕ್ಸ್‌ಪೈರಿ ಡೇಟ್ ಕೂಡಾ ಮುಗಿದುಹೋಗಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada