Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ಸ್ವರಾಜ್ಯದ ಕನಸು ಎಲ್ಲಿ ಹೋಯ್ತು: ಶಾಸಕ ಬಿನ್ನಿ ಪ್ರಶ್ನೆ

ಕೇಜ್ರಿವಾಲ್ ಸ್ವರಾಜ್ಯದ ಕನಸು ಎಲ್ಲಿ ಹೋಯ್ತು: ಶಾಸಕ ಬಿನ್ನಿ ಪ್ರಶ್ನೆ
, ಗುರುವಾರ, 16 ಜನವರಿ 2014 (17:57 IST)
PR
PR
ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತ ಭುಗಿಲೇಳುತ್ತಿದೆ. ಆಮ್ ಆದ್ಮಿ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿರುವ ಎಎಪಿ ಶಾಸಕ ವಿನೋದ್ ಕುಮಾರ್ ಬಿನ್ನಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಎಎಪಿಯ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದರು. ಎಎಪಿ ಟಿಕೆಟ್ ಹಂಚಿಕೆಯಲ್ಲಿ ಭ್ರಷ್ಟಾಚಾರವಾಗಿದೆ. ಕೇಜ್ರಿವಾಲ್ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ. ನಾಲ್ಕೈದು ಜನರಿಂದ ಗೋಡೆಗಳ ನಡುವೆ ಸರ್ಕಾರದ ಎಲ್ಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಕೇಜ್ರಿವಾಲ್ ಅವರ ಸ್ವರಾಜ್ಯದ ಕನಸು ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಜ. 27ರಂದು ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಎಎಪಿ ತೆರೆಯ ಹಿಂದೆ ಕಾಂಗ್ರೆಸ್ ಜತೆ ಮೈತ್ರಿ ಹೊಂದಿದೆ. ಸಂದೀಪ್ ದೀಕ್ಷಿತ್ ಜತೆ ಕೇಜ್ರಿವಾಲ್ ಹತ್ತಿರದ ನಂಟು ಹೊಂದಿದ್ದಾರೆ ಎಂದು ಆರೋಪಿಸಿದರು. ಕೇಜ್ರಿವಾಲ್ ಅವರು ದೊಡ್ಡ ಬಂಗಲೆಯ ಕನಸು ಹೊಂದಿದ್ದಾರೆ ಎಂದು ಆರೋಪಿಸಿದರು. ಕೇಜ್ರಿವಾಲ್ ಒಬ್ಬ ಅವಸರವಾದಿ ವ್ಯಕ್ತಿ ಎಂದೂ ಅವರು ಹೇಳಿದರು. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಬಯಸಿರಲಿಲ್ಲ. ದೆಹಲಿ ಲೋಕಸಭೆ ಸ್ಥಾನಗಳಿಗೆ ಹೆಸರು ಅಂತಿಮವಾಗಿದೆ ಎಂದೂ ಬಿನ್ನಿ ಹೇಳಿದರು. ಆದರೆ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗದಿದ್ದರಿಂದ ಬಿನ್ನಿ ಲೋಕಸಭೆಗೆ ಟಿಕೆಟ್ ಬಯಸಿದ್ದರು. ಅದು ಸಿಗದಿದ್ದರಿಂದ ನಿರಾಶೆಯಾಗಿ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada