Select Your Language

Notifications

webdunia
webdunia
webdunia
webdunia

ಕಾಶ್ಮೀರದ ಅರ್ಧ ಭಾಗ ಪಾಕಿನಿಂದ ಕಿತ್ತುಕೊಳ್ಳಿ: ಠಾಕ್ರೆ

ಮತ್ತೆ ತುರ್ತು ಪರಿಸ್ಥಿತಿ ಹೇರಲು ಶಿವಸೇನಾ ಮುಖಂಡ ಆಗ್ರಹ

ಕಾಶ್ಮೀರದ ಅರ್ಧ ಭಾಗ ಪಾಕಿನಿಂದ ಕಿತ್ತುಕೊಳ್ಳಿ: ಠಾಕ್ರೆ
1975 ಜೂನ್‌ನಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹೊರಿಸಿದ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ ಕೆಲವೇ ಮಂದಿಯಲ್ಲಿ ಶಿವ ಸೇನೆಯ ನಾಯಕ ಬಾಳಾ ಠಾಕ್ರೆ ಕೂಡ ಒಬ್ಬರು. ಆದರೆ ಈಗ 33 ವರ್ಷಗಳ ನಂತರ, ದೇಶದ ಈಗಿನ ಪರಿಸ್ಥಿತಿಯನ್ನು ಎದುರಿಸಲು ತುರ್ತು ಪರಿಸ್ಥಿತಿ ಹೇರಬೇಕೆಂದು ಮತ್ತೆ ಆಗ್ರಹಿಸಿರುವ ಠಾಕ್ರೆ, ಕಾಂಗ್ರೆಸ್‌ನ ದುರ್ಬಲ ಆಡಳಿತ ಇರುವವರೆಗೂ ದೇಶವು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

"ಈಗ ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಇಂಥ ಕಠಿಣ ನಿರ್ಧಾರ ತೆಗೆದುಕೊಳ್ಳುವ ತಾಕತ್ತು ಯಾರಿಗಿದೆ? ನನಗೆ ಇಂದಿರಾ ಗಾಂಧಿ ಜೊತೆ ಭಿನ್ನಾಭಿಪ್ರಾಯಗಳಿದ್ದವು, ಆದರೆ ಅವರ ಧೈರ್ಯ ಮೆಚ್ಚಬೇಕಾದ್ದು, ಅವರು ಪಾಕಿಸ್ತಾನಕ್ಕೆ ದಾಳಿ ಮಾಡಿದರು ಮತ್ತು ಬಾಂಗ್ಲಾ ದೇಶವನ್ನು ಸ್ವತಂತ್ರವಾಗಿಸಿದರು. ಪಾಕಿಸ್ತಾನದಿಂದ ಅರ್ಧ ಕಾಶ್ಮೀರವನ್ನು ಮರಳಿ ಪಡೆದು ತಮ್ಮ ತಾಕತ್ತನ್ನು ತೋರಿಸಲು ಇದು ಸಕಾಲ" ಎಂದು ಠಾಕ್ರೆ ತಿಳಿಸಿದರು.

ಮುಸ್ಲಿಮರ ವಿರುದ್ಧ ತೀವ್ರ ವಾಕ್ಪ್ರಹಾರ ನಡೆಸಿದ ಅವರು, ಮುಸ್ಲಿಮರ ಜೇಬುಗಳೇ ಪಾಕಿಸ್ತಾನಕ್ಕೆ ಬಲ ತುಂಬುತ್ತಿದೆ ಎಂದು ಆರೋಪಿಸಿದರು. ತುರ್ತು ಪರಿಸ್ಥಿತಿ ಹೇರಿ. ಯಾರನ್ನೂ ಬಿಡಬಾರದು. ಪಾಕಿಸ್ತಾನವನ್ನು ಬೆಂಬಲಿಸುವವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳಬೇಕು. ಈ ಸೌಲಭ್ಯಗಳಿಂದಾಗಿಯೇ ಮುಸ್ಲಿಮರು ತೀವ್ರಗಾಮಿಗಳಾಗಿದ್ದಾರೆ ಎಂದು ಠಾಕ್ರೆ ನುಡಿದರು.ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

Share this Story:

Follow Webdunia kannada