Select Your Language

Notifications

webdunia
webdunia
webdunia
webdunia

ಕಾರ್ಗಿಲ್ ಯುದ್ಧವನ್ನು ಜಯಿಸಿದ್ದು ಹಿಂದೂ ಸೈನಿಕರಲ್ಲ, ಮುಸ್ಲಿಂ ಸೈನಿಕರು: ಅಜಮ್ ಖಾನ್

ಕಾರ್ಗಿಲ್ ಯುದ್ಧವನ್ನು ಜಯಿಸಿದ್ದು ಹಿಂದೂ ಸೈನಿಕರಲ್ಲ, ಮುಸ್ಲಿಂ ಸೈನಿಕರು: ಅಜಮ್ ಖಾನ್
ಗಾಝಿಯಾಬಾದ್ , ಬುಧವಾರ, 9 ಏಪ್ರಿಲ್ 2014 (10:13 IST)
ಪದೇ ಪದೇ ವಿವಾದವನ್ನು ಸೃಷ್ಟಿಸುವುದರ ಮೂಲಕ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ 1999ರಲ್ಲಿ ಪಾಕಿಸ್ತಾನದ ಜತೆಗಿನ ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿಗಾಗಿ ಕೇವಲ ಮುಸ್ಲಿಂ ಸೈನಿಕರು ಹೋರಾಡಿದ್ದರು ಎಂಬುದರ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.
PTI

ಕಳೆದ ರಾತ್ರಿ ಗಾಝಿಯಾಬಾದ್‌ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾರ್ಗಿಲ್ ಯುದ್ಧದ ವಿಷಯವನ್ನು ಸಹ ಎಳೆದು ತಂದ ಉತ್ತರಪ್ರದೇಶದ ಮಂತ್ರಿಯ ಹೇಳಿಕೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದವರಲ್ಲಿ ಹಿಂದೂ ಸೈನಿಕರಿರಲಿಲ್ಲ. ವಿಜಯಕ್ಕಾಗಿ ಹೋರಾಡಿದವರು ಮುಸ್ಲಿಂ ಯೋಧರಾಗಿದ್ದರು. ಮುಸ್ಲಿಂ ಸಮುದಾಯದವರಷ್ಟು ಜಾಗರೂಕತೆಯಿಂದ ದೇಶದ ಗಡಿಯನ್ನು ಯಾರೂ ಕಾಯಲಾರರು ಎನ್ನುವ ಅಸಂಬದ್ಧ ಹೇಳಿಕೆಯನ್ನು ನೀಡುವುದರ ಮೂಲಕ ಖಾನ್ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ.

"ನಮ್ಮನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಿ. ನಮಗಿಂತ ಉತ್ತಮವಾಗಿ ದೇಶದ ಸರಹದ್ದನ್ನು ಯಾರೂ ಕಾಯಲಾರರು" ಎಂದು ಅವರು ಹೇಳಿದ್ದಾರೆ.

ಖಾನ್ ಹೇಳಿಕೆಗೆ ಜನರಲ್ ವಿ.ಕೆ ಸಿಂಗ್ ಪ್ರತಿಕ್ರಿಯೆ.....

ಅಜಮ್ ಖಾನ್‌ರವರ ಈ ವಿವಾದಾತ್ಮಕ ಭಾಷಣಕ್ಕೆ ತೀವೃವಾಗಿ ಖಂಡಿಸಿರುವ ಬಿಜೆಪಿ ಅಭ್ಯರ್ಥಿ, ಮಾಜಿ ಸೇನಾಧಿಕಾರಿ ಜನರಲ್ ವಿ.ಕೆ ಸಿಂಗ್ ಕಾರ್ಗಿಲ್ ಯುದ್ಧವನ್ನು ಭಾರತೀಯರು ಗೆದ್ದಿದ್ದರು ಎಂದು ಹೇಳಿದ್ದಾರೆ.
webdunia
PTI

"ಸೈನ್ಯದಲ್ಲಿ ಜಾತಿ, ಪಂಥ, ಧರ್ಮಗಳನ್ನು ಎಳೆದು ತರುವ ವ್ಯಕ್ತಿಯನ್ನು ನಿಂದನೆ ಮಾಡಬೇಕು. ಅವರು ಯಾರೇ ಆಗಿರಲಿ. ಯುದ್ಧವನ್ನು ಜಯಿಸಿದ್ದು ಭಾರತೀಯರು, ಹೊರತು ಯಾವುದೇ ಧರ್ಮ, ಪಂಥ, ಜಾತಿ, ಸಮಾಜದವರಲ್ಲ" ಎಂದು ಸಿಂಗ್ ಗುಡುಗಿದ್ದಾರೆ.

ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada