Select Your Language

Notifications

webdunia
webdunia
webdunia
webdunia

ಕಾರು ಓಡುತ್ತಿತ್ತು. ಒಳಗೆ ರೇಪ್‌ ನಡೆಯುತ್ತಿತ್ತು.

ಕಾರು ಓಡುತ್ತಿತ್ತು. ಒಳಗೆ ರೇಪ್‌ ನಡೆಯುತ್ತಿತ್ತು.
ಜೈಪುರ , ಸೋಮವಾರ, 31 ಮಾರ್ಚ್ 2014 (17:37 IST)
ಮಹಿಳೆಯರು ಎಲ್ಲೇ ಇದ್ದರೂ ಸುರಕ್ಷಿತರಲ್ಲ ಎಂಬುದಕ್ಕೆ ಮತ್ತೊಂದು ದಂತ ನಿದರ್ಶನ ಸಿಕ್ಕಿದೆ. ಇಲ್ಲಿನ ಕೂಲಿ ಕಾರ್ಮಿಕಗಳೊಬ್ಬಳನ್ನು ಕಾರಿನಲ್ಲಿ ಹೊತ್ತೊಯ್ದ ಮೂವರು ಕಾಮುಕರು ಚಲಿಸುತ್ತಿರುವ ಕಾರಿನಲ್ಲೇ ಆಕೆಯನ್ನು ಸಾಮೂಹಿಕವಾಗಿ ಒಬ್ಬರಾದ ನಂತ ಒಬ್ಬರು ರೇಪ್‌ ಮಾಡಿದ್ದಾರೆ.

ಜೈಪುರ ಸಮೀಪದ ಅಂಬರ್‌ ಕೋಟೆಯ ಬಳಿ ಇರುವಂಥ ಕುಕುಸ್‌ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂವರು ಕಾಮುಕ ದುಷ್ಟರು ಇಲ್ಲಿನ ಪ್ರದೇಶಕ್ಕೆ ಬಂದು "ನಮ್ಮ ಹತ್ತಿರ ಕೂಲಿ ಕೆಲಸ ಇದೆ. ಬನ್ನಿ" ಅಂತ ಪುಸಲಾಯಿಸಿ 24 ರ ಹರೆಯದ ಹೆಣ್ಣುಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ಹೋಗುವಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ನಿರಂತರವಾಗಿ ತಮಗೆ ಸಾಕಾಗುಷ್ಟು ಸಮಯ ಆಕೆಯನ್ನು ಸಂಪೂರ್ಣವಾಗಿ ಅನುಭವಿಸಿದ ಕಾಮ ಪಿಪಾಸುಗಳು ಕರುಣೆಯೇ ಇಲ್ಲದೇ ಆಕೆಯನ್ನು ಮರುಳುಗಾಡಿನಲ್ಲಿ ಎಸೆದು ಹೋಗಿದ್ದಾರೆ. ಅಷ್ಟೇ ಅಲ್ಲ, ಈ ವಿಷಯವನ್ನು ಎಲ್ಲಾದರೂ ಹೊರಗೆ ಬಾಯಿ ಬಿಟ್ಟರೆ ಮತ್ತೆ ಬಂದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಆದ್ರೆ ಯುವತಿ ಕಾಣೆಯಾಗಿದ್ದರಿಂದ ಆಕೆಯ ಗಂಡ ಪೋಲೀಸ್‌ ಠಾಣೆಗೆ ದೂರು ನೀಡಿದ್ದ. ನಾಪತ್ತೆಯಾಗಿದ್ದ ಮಹಿಳೆಗಾಗಿ ಪೋಲೀಸರು ಶೋಧ ನಡೆಸುತ್ತಿರುವಾಗ, ಮರಳುಗಾಡಿನಲ್ಲಿ ಅನಾಥವಾಗಿ ಬಿದ್ದಿದ್ದ ಆ ಅಬಲೆ ಹೆಣ್ಣು ಅರೆ ನಗ್ನವಾಗಿ ಸಿಕ್ಕಿದ್ದಾಳೆ.

Share this Story:

Follow Webdunia kannada