Webdunia - Bharat's app for daily news and videos

Install App

ಕಾಂಗ್ರೆಸ್‌ನದ್ದು ದುರ್ಬಲ ಕೈ, ಮೋದಿಯದ್ದು ಉಕ್ಕಿನದ್ದು: ರಾಜನಾಥ್ ಸಿಂಗ್

Webdunia
ಗುರುವಾರ, 4 ಜುಲೈ 2013 (12:47 IST)
PTI
ಯುಪಿಎ ಸರಕಾರದ ಆಡಳಿತದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲಪಿರುವುದನ್ನು ಟೀಕಿಸಿದ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್‌, ಆರ್ಥಿಕ ತಜ್ಞ ರೆನಿಸಿರುವ ಪ್ರಧಾನಿಯನ್ನು ಹೊಂದಿದ್ದರೂ ದೇಶದ ಆರ್ಥಿಕ ಆರೋಗ್ಯ ಕ್ಷೀಣಿಸಿರುವುದು ವಿಪರ್ಯಾಸ ಎಂದು ಹೇಳಿದರು.

' ದೇಶದ ಆಡಳಿತ ಉಕ್ಕಿನ ಕೈಗಳಲ್ಲಿರಬೇಕೇ ಹೊರತು ದುರ್ಬಲ ಕೈಗಳಲ್ಲಿ ಅಲ್ಲ. ತುಟಿ ಬಿಚ್ಚದ ವ್ಯಕ್ತಿ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಅವರು ಪ್ರಧಾನಿಯ ಹೆಸರು ಹೇಳದೆಯೇ ವಾಗ್ಧಾಳಿ ನಡೆಸಿದರು.

' ದೇಶಕ್ಕೆ ಅರ್ಥ ತಜ್ಞ ಪ್ರಧಾನಿಯ ಅಗತ್ಯವೇ ಇಲ್ಲ. ನಮಗೆ ಬೇಕಾದದ್ದು ವಸ್ತು ಸ್ಥಿತಿಗೆ ಸ್ಪಂದಿಸುವ, ನೈಜ ಸಮಸ್ಯೆಗಳ ಅರಿವುಳ್ಳ ಪ್ರಧಾನಿ' ಎಂದು ಅಸ್ಸಾಂನ ಬಿಜೆಪಿ ಕಾರ್ಯಕರ್ತರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ರಾಜನಾಥ್‌ ಸಿಂಗ್‌ ಹೇಳಿದರು.

' ಎನ್‌ಡಿಎ ಆಡಳಿತ ಕಾಲದಲ್ಲಿ ಆರ್ಥಿಕ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಇದೀಗ ಯುಪಿಎ ಆಡಳಿತದಲ್ಲಿ ಅದು ತೂಕ ತಪ್ಪಿದೆ' ಎಂದ ರಾಜನಾಥ್‌ ಸಿಂಗ್‌ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ ಕಾಳಧನವನ್ನು ಕಾಂಗ್ರೆಸ್‌ ನಾಯಕರು ಹಿಂದೆ ಪಡೆಯುತ್ತಿರುವುದರಿಂದಲೇ ರೂಪಾಯಿಯ ಮೌಲ್ಯ ಕಡಿಮೆಯಾಗಿದೆ. ಈ ಪರಿಸ್ಥಿತಿಗೆ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments