Webdunia - Bharat's app for daily news and videos

Install App

ಕಳಂಕಿತರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಡಿ: ಹಜಾರೆ

Webdunia
ಮಂಗಳವಾರ, 2 ಏಪ್ರಿಲ್ 2013 (12:17 IST)
PTI
ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಅಂಗೀಕಾರವಾಗಲು ಭ್ರಷ್ಟ ರಾಜಕಾರಣಿಗಳು ಬಿಡುವುದೇ ಇಲ್ಲ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಸುತ್ತಿರುವ ಅಣ್ಣಾ ಹಜಾರೆ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ಶುದ್ಧ ಹಸ್ತದ ಅಭ್ಯರ್ಥಿಗಳನ್ನೇ ಚುನಾಯಿಸಿ ಸಂಸತ್ತಿಗೆ ಕಳುಹಿಸಬೇಕು ಎಂದು ಅವರು ಕರೆ ನೀಡಿದರು.

ಜನಸೇವೆ ಮಾಡಲು ಜನನಾಯಕರನ್ನು ಮತದಾರರು ಆರಿಸಿ ಕಳುಹಿಸುತ್ತಾರೆ. ಆದರೆ ಗೆದ್ದ ಮೇಲೆ ಅವರೆಲ್ಲ ದರೋಡೆಕೋರರ ಪಾತ್ರ ವಹಿಸುತ್ತಾರೆ. ವಿಧಾನ ಸಭೆ ಇರಲಿ , ಸಂಸತ್‌ ಇರಲಿ ಜನರನ್ನು ಲೂಟಿ ಮಾಡುವುದರಲ್ಲೇ ಅವರು ಸುಖ ಕಾಣುತ್ತಾರೆ' ಎಂದು ಹಜಾರೆ ಹೇಳಿದರು. ಅವರು ಬಿಗು ಭದ್ರತೆಯಲ್ಲಿ ಜಲಂಧರ್‌ಗೆ ಆಗಮಿಸಿದ ಜನತಂತ್ರಯಾತ್ರಾದಲ್ಲಿ ಪಾಲ್ಗೊಂಡು ಮಾತನಾಡಿದರು.

' ಪ್ರಸಕ್ತ ಸಂಸತ್ತಿನಲ್ಲಿ 163 ಮಂದಿ ಸಂಸದರು ಮತ್ತು 15 ಮಂದಿ ಸಚಿವರು ಕಳಂಕಿತರಾಗಿದ್ದಾರೆ. ಭ್ರಷ್ಟಾಚಾರ ಸಹಿತ ಅನೇಕ ಪ್ರಕರಣಗಳಲ್ಲಿ ಶಾಮೀಲಾದ ಆರೋಪ ಹೊತ್ತಿದ್ದಾರೆ. ಅವರಿಗೆಲ್ಲ ಜನಸೇವೆಯತ್ತ ದೃಷ್ಟಿ ಇರುತ್ತದೋ ಅಥವಾ ಸಂಸದರಾಗಿ ಕಳಂಕ ತೊಡೆದುಕೊಳ್ಳುವ ಆಸ್ಥೆ ಇರುತ್ತದೋ ಎನ್ನುವುದನ್ನು ವಿಶ್ಲೇಷಿಸಿ ಬಳಿಕವೇ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು 'ಎಂದು ಹಜಾರೆ ಹೇಳಿದರು.

' ಭಾರತವನ್ನು ಭ್ರಷ್ಟಾಚಾರಮುಕ್ತಗೊಳಿಸಬೇಕಾದರೆ ಲೋಕಪಾಲ ಮಸೂದೆ ಜಾರಿಗೆ ಬರಲೇ ಬೇಕು. ಈ ಕಾರಣದಿಂದಲೇ ಭ್ರಷ್ಟ ನಾಯಕರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರು ಎಂದೂ ಈ ಮಸೂದೆ ಅಂಗೀಕಾರವಾಗಲ ಬಿಡುವುದಿಲ್ಲ . ನಿಮ್ಮನ್ನು ಇನ್ನಷ್ಟು ಕಾಲ ವಂಚಿಸಲು ಅವರಿಗೆ ಅವಕಾಶ ನೀಡಬೇಡಿ ' ಎಂದು ಹಜಾರೆ ಜನರಲ್ಲಿ ಮನವಿ ಮಾಡಿದರು.

' ಬ್ರಿಟೀಷರ ಕೈಯಿಂದ ಭಾರತವೇನೋ ಪಾರಾಯಿತು. ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments