Webdunia - Bharat's app for daily news and videos

Install App

ಕರ್ನಾಟಕದ ನಾಲ್ವರು ಭ್ರಷ್ಟ ಮುಖಂಡರನ್ನು ಸೋಲಿಸಲು ಕೇಜ್ರಿವಾಲ್ ಕರೆ

Webdunia
ಶುಕ್ರವಾರ, 31 ಜನವರಿ 2014 (14:47 IST)
PR
PR
ಆಮ್ ಆದ್ಮಿ ಪಕ್ಷ ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಜ್ಜುಗೊಂಡಿದ್ದು, ಕರ್ನಾಟಕದ ನಾಲ್ವರು ಭ್ರಷ್ಟ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುವುದಕ್ಕೆ ರಣತಂತ್ರ ರೂಪಿಸುತ್ತಿದೆ. ಅನಂತಕುಮಾರ್, ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರನ್ನು ಕೇಜ್ರಿವಾಲ್ ಭ್ರಷ್ಟ ನಾಯಕರ ಪಟ್ಟಿಯಲ್ಲಿ ಹೆಸರಿಸಿದ ಕರ್ನಾಟಕದ ನಾಲ್ವರು ಮುಖಂಡರು. ಕನ್ನಿ ಮೋಳಿ, ಸಲ್ಮಾನ್ ಖುರ್ಷಿದ್, ಮಾಯಾವತಿ ,ಮುಲಾಯಂ, ಜಗನ್ ಮೋಹನ್ ರೆಡ್ಡಿ, ಕಪಿಲ್ ಸಿಬಾಲ್, ಕಮಲ್ ನಾಥ್, ಫಾರುಕ್ ಅಬ್ದುಲ್ಲಾ, ಶರದ್ ಪವಾರ್, ತರುಣ್ ಗಗೋಯಿ ನಿತಿನ್ ಗಡ್ಕರಿ ಹೆಸರನ್ನು ಕೂಡ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಭ್ರಷ್ಟರು ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

PR
PR
541 ಮಂದಿ ಲೋಕಸಭಾ ಸದಸ್ಯರ ಪೈಕಿ 161 ಮಂದಿ ಕಳಂಕಿತರು ಸಂಸತ್ತನ್ನು ಪ್ರವೇಶಿಸಿದ್ದಾರೆ. ಆಪ್ ಪಕ್ಷದ ಪ್ರಮುಖ ಅಜೆಂಡಾ ಭ್ರಷ್ಟಾಚಾರ ನಿರ್ಮೂಲನೆಯಾಗಿದ್ದು ಈಗ ಆಪ್ 161 ಭ್ರಷ್ಟ ನಾಯಕರಗಳ ಪಟ್ಟಿಯನ್ನು ಮಾಡಿದೆ.

PR
PR
ಕರ್ನಾಟಕದ ನಾಲ್ವರು ವೀರಪ್ಪ ಮೊಯ್ಲಿ, ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಅನಂತಕುಮಾರ್ ಎಲ್ಲರೂ ಭ್ರಷ್ಟ ನಾಯಕರು. ಇವರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಇವರನ್ನು ಸೋಲಿಸಬೇಕು ಎಂದು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಅನಂತ ಕುಮಾರ್ ವಿರುದ್ಧ ಹುಡ್ಕೊ ಹಗರಣಗಳಿವೆ. ಯಡಿಯೂರಪ್ಪ ವಿರುದ್ಧ ಗಣಿದಣಿಗಳಿಂದ ಕಿಕ್‌ಬ್ಯಾಕ್ ಪಡೆದ ಆರೋಪವಿದೆ. ಕುಮಾರಸ್ವಾಮಿ ವಿರುದ್ಧ ಗಣಿ ಅಕ್ರಮದ ದೂರುಗಳಿವೆ.

PR
PR
ಈ ಭ್ರಷ್ಟ ನಾಯಕರು ಸಂಸತ್ತನ್ನು ಪ್ರವೇಶಿಸಲು ತಡೆಯಬೇಕು ಎಂದು ಭ್ರಷ್ಟರ ವಿರುದ್ಧ ಕೇಜ್ರಿವಾಲ್ ಗುಡುಗಿದ್ದಾರೆ. ಆ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ಪ್ರಮುಖವಿಚಾರವನ್ನಾಗಿ ಮಾಡಿಕೊಂಡು ಆಮ್ ಆದ್ಮಿ ಪ್ರಚಾರ ನಡೆಸಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments