Webdunia - Bharat's app for daily news and videos

Install App

ಓಡಿಹೋದ ಮಗ: ಫೇಸ್‌ಬುಕ್‌ನಿಂದ ಪುನರ್ಮಿಲನ

Webdunia
ಬುಧವಾರ, 31 ಜುಲೈ 2013 (14:10 IST)
PR
PR
ಪುಣೆ: ಇದು ಬಾಲಿವುಡ್ ಚಿತ್ರಕಥೆಯಿಂದ ನೇರವಾಗಿ ತೆಗೆದುಕೊಂಡಂತೆ ಕಾಣಬಹುದಾದರೂ, ನಿಜವಾಗಿ ನಡೆದ ಕಥೆಯಾಗಿದೆ. ಚೆನ್ನಾಗಿ ಓದದೇ ಇರುವುದಕ್ಕೆ ತಾಯಿಯಿಂದ ಏಟುಗಳನ್ನು ತಿಂದ 12 ವರ್ಷ ವಯಸ್ಸಿನ ಬಾಲಕ ಅಂಕುಶ್ ಡೊಮಾಲೆ 2002ರ ಫೆಬ್ರವರಿಯಲ್ಲಿ ಮನೆಬಿಟ್ಟು ಓಡಿಹೋದ. ಪುಣೆಯಿಂದ 400 ಕಿ.ಮೀ ದೂರದ ನಾಂದೆಡ್‌ಗೆ ಓಡಿಹೋದ ಬಾಲಕ ಗುರುದ್ವಾರದಲ್ಲಿ ಭಕ್ತರ ಸೇವೆಯನ್ನು ಮಾಡಲಾರಂಭಿಸಿದ.

ಅವನ ಕಾರ್ಯನಿಷ್ಠೆ ಮತ್ತು ಕಷ್ಟಪಟ್ಟು ದುಡಿಯುವ ಪ್ರವೃತ್ತಿಯನ್ನು ಮೆಚ್ಚಿಕೊಂಡ ಗುರು ಅವನನ್ನು ಲೂಧಿಯಾನಕ್ಕೆ ಕೆರದುಕೊಂಡು ಹೋದರು. ಅಲ್ಲಿ ರೆರು ಸಾಹೇಬ್ ಗುರುದ್ವಾರದಲ್ಲಿ ಅಂಕುಶ್ ವಾಸಿಸಲಾರಂಭಿಸಿದ. ಅವನು ಪೇಠವನ್ನು ತೊಟ್ಟು ಗುರುಬನ್ ಸಿಂಗ್ ಎಂಬ ಹೆಸರನ್ನು ಹೊಂದಿದ. ಸಿಖ್ಖರ ರೀತಿಯಲ್ಲಿ ಜೀವನ ಆರಂಭಿಸಿದ ಅಂಕುಶ್‌ಗೆ ತನ್ನ ಕುಟುಂಬದ ಮೇಲಿನ ಪ್ರೇಮ ಅಳಿಸಿಹೋಗಿರಲಿಲ್ಲವಾದ್ದರಿಂದ ಕುಟುಂಬವನ್ನು ಹುಡುಕಲಾರಂಭಿಸಿದ. ಅವನ ಚಿಕ್ಕಪ್ಪನ ದೂರವಾಣಿ ಸಂಖ್ಯೆ ಮಾತ್ರ ಸಂಪರ್ಕದ ಏಕಮಾತ್ರ ದಾರಿಯಾಗಿತ್ತು. ಆದರೆ ಕುಟುಂಬ ಮನೆಯನ್ನು ಬದಲಾಯಿಸಿದ್ದರಿಂದ ಅದರ ಸಂಪರ್ಕವೂ ತಪ್ಪಿಹೋಗಿತ್ತು. ಈ ನಡುವೆ ಅಂಕುಶ್ ತಾಯಿ ಹೇಮಲತಾ ಮತ್ತು ಸೋದರ ಸಂತೋಷ್ ಕೂಡ ಅಂಕುಶ್‌ಗಾಗಿ ಹುಡುಕಾಟ ನಡೆಸಿದರೂ ಫಲ ನೀಡಿರಲಿಲ್ಲ. ಎರಡು ವಾರಗಳ ಹಿಂದೆ ಅಂಕುಶ್ ತನ್ನ ಕಿರಿಯ ಸೋದರನಿಗಾಗಿ ಫೇಸ್‌ಬುಕ್‌ನಲ್ಲಿ ಸರ್ಚ್ ಮಾಡಿದ. ಸಂತೋಷ್ ಹೆಸರಿನ ಅನೇಕ ಚಿತ್ರಗಳನ್ನು ತಡಕಾಡಿ ತನ್ನಂತೆ ಕಾಣುವ ಸೋದರನ ಚಿತ್ರದ ಗುರುತು ಹಿಡಿದು, ಅವರ ವಿಳಾಸವನ್ನು ಪತ್ತೆಹಚ್ಚಿದ. ತಾನು ಮನೆಯ ಬಳಿ ಆಟವಾಡುವಾಗ ಮುಖದಲ್ಲಿ ಗಾಯವಾಗಿದ್ದು, ಆ ಗಾಯದ ಗುರುತನ್ನು ಹೇಳಿ ತಾಯಿ, ಸೋದರರಿಗೆ ಮನದಟ್ಟು ಮಾಡಿದ.

ಲೂಧಿಯಾನದಲ್ಲಿರುವ ಅವನ ಗುರು ತಕ್ಷಣವೇ ಲೂಧಿಯಾನದಿಂದ ಪುಣೆಗೆ ತೆರಳಲು ಅವನಿಗೆ ವ್ಯವಸ್ಥೆ ಮಾಡಿದರು. ಸಿಖ್ ಅವತಾರದಲ್ಲಿ ಅಂಕುಶ್‌ನನ್ನು ಕಂಡಾಗ ನೆರೆಮನೆಯವರಿಗೆ ಮತ್ತು ಬಂಧುಗಳಿಗೆ ನಂಬಲಾಗಲಿಲ್ಲ. ಆದರೆ ಡೊಮಾಲೆ ಕುಟುಂಬಕ್ಕೆ ಇದೊಂದು ಸಂತೋಷದ ಪುನರ್ಮಿಲನವಾಗಿತ್ತು. ತಾಯಿ, ಸೋದರನ ಹೃದಯ ತುಂಬಿ ಬಂದಿತು. 12 ವರ್ಷಗಳ ಹಿಂದೆ ಕಳೆದುಹೋದ ತಮ್ಮ ಪುತ್ರ ಮತ್ತೆ ಸಿಕ್ಕಾಗ ಮಾತೃಹೃದಯಕ್ಕಾದ ಖುಷಿ ಅಷ್ಟಿಷ್ಟಲ್ಲ. ಇವರನ್ನು ಒಂದುಗೂಡಿಸಿದ ಫೇಸ್‌ಬುಕ್‌ಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments