Webdunia - Bharat's app for daily news and videos

Install App

ಒಂಬತ್ತನೇ ಕ್ಲಾಸ್‌ ವಿದ್ಯಾರ್ಥಿನಿಯ ಮೇಲೆ 3 ವರ್ಷ ಅತ್ಯಾಚಾರಗೈದ ಕಾಮುಕ

Webdunia
ಸೋಮವಾರ, 31 ಮಾರ್ಚ್ 2014 (16:44 IST)
ದೇಶದಲ್ಲಿ ಅತ್ಯಾಚಾರಗಳಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಕೊನೆಯಿಲ್ಲದಂತಾಗಿದೆ. ರುಚಿಕಾ ಎನ್ನುವ 9ನೇ ಕ್ಲಾಸಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ನಗರದ ಬಾತ್ರಾ ಕಾಲೋನಿಯಲ್ಲಿರುವ ಯುವಕನೊಬ್ಬ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಸೇರಿಸಿ ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿನಿಯನ್ನು ಹೊತ್ತೊಯ್ದು ಮೂರು ವರ್ಷಗಳ ಕಾಲ ನಿರಂತರ ಅತ್ಯಾಚಾರವೆಸಗಿದ್ದಾನೆ.

ಮಧ್ಯಮ ವರ್ಗದ ಕುಟುಂಬದಿಂದ ಬಂದ ರುಚಿಕಾ ಎನ್ನುವ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಯುವಕನೊಬ್ಬ ಪ್ರತಿನಿತ್ಯ ಪೀಡಿಸಿದ್ದಾನೆ. ರುಚಿಕಾ ತಂದೆ ಸಾವನ್ನಪ್ಪಿದ್ದರಿಂದ ಕುಟುಂಬದ ನಿರ್ವಹಣೆಗೆ ತಾಯಿ ಬೇರೆ ಕಡೆ ಕೆಲಸಕ್ಕೆ ಹೋಗಲು ಆರಂಭಿಸಿದ್ದಾಳೆ. ತಾನು ಓದು ವಿದ್ಯಾವಂತಳಾಗಬೇಕು ಎನ್ನುವ ಬಯಕೆಯಿಂದ ಎಲ್ಲಾ ಗಮನವನ್ನು ಓದಿನತ್ತ ಕೇಂದ್ರಿಕರಿಸಿದ್ದಾಳೆ.

PR
ಆದರೆ, ಯುವಕ ನಿರಂತರವಾಗಿ ಬಾಲಕಿಯನ್ನು ಫಾಲೋ ಮಾಡುತ್ತಲೇ ಇದ್ದನು. ಮನೆಗೆ ದೂರವಾಣಿ ಕರೆ ಕೂಡಾ ಮಾಡಲು ಆರಂಭಿಸಿದ. ದೂರವಾಣಿ ಕರೆಗಳಿಂದ ಬಾಲಕಿ ತುಂಬಾ ಆತಂಕಗೊಂಡಿದ್ದಾಳೆ.ಆದರೆ, ಕಾಮುಕನ ಕಾಟ ನಿರಂತರ ಮುಂದುವರಿದಿದೆ. ಮದವೆಯಾದ ನಂತರ ಓದು ಎಂದು ದುಂಬಾಲು ಬಿದ್ದಿದ್ದಾನೆ.

ಒಂದು ದಿನ ರುಚಿಕಾ ರಸ್ತೆಯಲ್ಲಿ ತೆರಳುತ್ತಿದ್ದಾಗ ಎದುರಾದ ಯುವಕ ಅಳಲು ಆರಂಭಿಸಿ ನಿನ್ನ ಜೊತೆ ಮಾತನಾಡಲೇಬೇಕು ಎಂದು ಒತ್ತಾಯಿಸಿದ್ದಾನೆ. ಆಕೆಯನ್ನು ಹತ್ತಿರದ ಹೋಟೆಲ್‌ಗೆ ಕರೆದುಕೊಂಡು ಹೋಗಿ ಬಾಲಕಿಗೆ ಸಮೋಸಾ ಮತ್ತು ತಂಪು ಪಾನೀಯ ಕೊಡಿಸಿದ್ದಾನೆ. ತಂಪು ಪಾನೀಯ ಸೇವಿಸಿದ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಪ್ರಜ್ಞೆ ತಪ್ಪಿ ಬಿದ್ದ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ ನಿರಂತರ ಅತ್ಯಾಚಾರವೆಸಗಿದ್ದಾನೆ. ಚಿಂತೆ ಮಾಡಬೇಡ ನಾನು ನಿನ್ನನ್ನು ಮದುವೆಯಾಗುತ್ತೇನೆ. ಒಂದು ವೇಳೆ ಪೊಲೀಸರಿಗೆ ತಿಳಿಸಿದಲ್ಲಿ ನಿನ್ನ ತಾಯಿಯನ್ನು ಹತ್ಯೆ ಮಾಡುವುದಾಗಿ ಬಾಲಕಿಗೆ ಬೆದರಿಕೆಯೊಡ್ಡಿದ್ದಾನೆ. ನಿರಂತರ ಮೂವರು ವರ್ಷಗಳ ಕಾಲ ಬಾಲಕಿ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ.

ಯುವಕನ ಕೇವಲ ಆಶ್ವಾಸನೆಗಳಿಂದ ಬೇಸತ್ತ ಬಾಲಕಿ ಇದೀಗ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಅತ್ಯಾಚಾರ, ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕೃಷ್ಣನ ಜನ್ಮಸ್ಥಾನಕ್ಕೆ ಅಟ್ಟಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments