Select Your Language

Notifications

webdunia
webdunia
webdunia
webdunia

ಐಎಎಸ್ ಅಧಿಕಾರಿಯಿಂದಲೇ ಯುವತಿಯ ಮೇಲೆ ಅತ್ಯಾಚಾರ

ಐಎಎಸ್ ಅಧಿಕಾರಿಯಿಂದಲೇ ಯುವತಿಯ ಮೇಲೆ ಅತ್ಯಾಚಾರ
ಜೈಪುರ್ , ಶನಿವಾರ, 5 ಏಪ್ರಿಲ್ 2014 (14:08 IST)
ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವುದಾಗಿ ನಂಬಿಸಿ ಕಳೆದ ಏಳು ತಿಂಗಳುಗಳಿಂದ ಯುವತಿಯ ಮೇಲೆ ಐಎಎಸ್ ಅಧಿಕಾರಿ ಬಿಬಿ ಮೊಹಾಂತಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.

1977 ಬ್ಯಾಚ್ ಅಧಿಕಾರಿಯಾದ ಮೊಹಾಂತಿ ರಾಜಸ್ಥಾನ ನಾಗರೇಕ ಸೇವಾ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅತ್ಯಾಚಾರಕ್ಕೊಳಗಾದ ಯುವತಿ ಮಾತನಾಡಿ, ಐಎಎಸ್ ಮಾಡಬೇಕು ಎನ್ನುವ ಉದ್ದೇಶದಿಂದ ಉತ್ತರಪ್ರದೇಶ ಮೂಲದವಳಾದ ನಾನು ರಾಜಸ್ಥಾನದ ಜೈಪುರ್‌ ನಗರದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದೆ, ಪರೀಕ್ಷೆಗಳಲ್ಲಿ ನೆರವು ನೀಡುವುದಾಗಿ ನಂಬಿಸಿ ಕಳೆದ ವರ್ಷ ಫೆಬ್ರವರಿ 19 ರಂದು ಮೊಹಾಂತಿ ತಮ್ಮ ನಿವಾಸದಲ್ಲಿ ಮೊದಲ ಬಾರಿಗೆ ಅತ್ಯಾಚಾರವೆಸಗಿದ್ದರು. ನಂತರ ಉದಯ್‌ಪುರ್, ಗೋವಾ, ಚೆನ್ನೈ ಮತ್ತು ಭರತ್‌ಪುರ್ ನಗರಗಳಿಗೆ ಕರೆದುಕೊಂಡು ಹೋಗಿ ಹೋಟೆಲ್‌ನಲ್ಲಿ ಅತ್ಯಾಚಾರವೆಸಗಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಕಳೆದ ನವೆಂಬರ್ ತಿಂಗಳಲ್ಲಿ ಇದೇ ಯುವತಿ ಹಾಸ್ಟೆಲ್‌ ಮಾಲೀಕ ಕೂಡಾ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.ಆರೋಪಿ ರಾಮ್‌ಗೋಪಾಲ್ ತುಮಾವತ್ ಇನ್ನೂ ಜೈಲಿನಲ್ಲಿದ್ದಾನೆ. ಇದೀಗ ಅದೇ ಯುವತಿ ಐಎಎಸ್ ಅಧಿಕಾರಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ಡಿಸಿಪಿ ಸಂಜಯ್ ಕ್ಷೋತ್ರಿಯಾ ತಿಳಿಸಿದ್ದಾರೆ.

Share this Story:

Follow Webdunia kannada