Select Your Language

Notifications

webdunia
webdunia
webdunia
webdunia

ಐಎಎಫ್ ವಿಮಾನ ಗ್ವಾಲಿಯರ್ ಬಳಿ ಪತನ: ನಾಲ್ವರ ದುರ್ಮರಣ

ಐಎಎಫ್ ವಿಮಾನ ಗ್ವಾಲಿಯರ್ ಬಳಿ ಪತನ: ನಾಲ್ವರ ದುರ್ಮರಣ
, ಶುಕ್ರವಾರ, 28 ಮಾರ್ಚ್ 2014 (12:57 IST)
PR
PR
ಗ್ವಾಲಿಯರ್ : ಭಾರತೀಯ ವಾಯುಸೇನೆಗೆ ಸೇರಿದ ವಿಮಾನ ಪತನಗೊಂಡಿದ್ದು ವಿಮಾನದಲ್ಲಿದ್ದ ನಾಲ್ವರು ದುರ್ಮರಣವಪ್ಪಿದ್ದಾರೆ. ಗ್ವಾಲಿಯರ್‌ನಿಂದ 72 ಕಿಮೀ ದೂರದಲ್ಲಿ ವಿಮಾನ ಪತನವಾಗಿದೆ. ಅಮೆರಿಕ ನಿರ್ಮಿತ ಸಿ-130ಜೆ ಸೂಪರ್ ಸರ್ಕ್ಯೂಲಸ್ ವಿಮಾನವಾಗಿದ್ದು, ಆಗ್ರಾ ವಾಯುನೆಲೆಯಿಂದ ಹಾರಿದ ಕೂಡಲೇ ಗ್ವಾಲಿಯರ್ ಬಳಿ ಅಪಘಾತಕ್ಕೀಡಾಗಿದೆ. ಹಾರಾಟ ಅಭ್ಯಾಸದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಬಹುಪಾತ್ರದ ವಿಶೇಷ ಕಾರ್ಯಾಚರಣೆ ವಿಮಾನವನ್ನು ನಾಪತ್ತೆಯಾದ ಮಲೇಷ್ಯಾ ಏರ್‌ಲೈನರ್ ಎಂಎಚ್ 370 ಶೋಧಕ್ಕಾಗಿ ಬಳಸಿಕೊಳ್ಳಲಾಗಿತ್ತು. ಉತ್ತರಾಖಂಡ ಪ್ರವಾಹದಲ್ಲಿ ಪರಿಹಾರ ಕಾರ್ಯಾಚರಣೆಗೆ ಕೂಡ ಇದನ್ನು ಬಳಸಲಾಗಿತ್ತು.

Share this Story:

Follow Webdunia kannada