Select Your Language

Notifications

webdunia
webdunia
webdunia
webdunia

ಎಎಪಿ ಹೊಸ ವರ್ಷದ ಕೊಡುಗೆ: ವಿದ್ಯುತ್ ದರದಲ್ಲಿ ಶೇ.50 ಕಡಿತ

ಎಎಪಿ ಹೊಸ ವರ್ಷದ ಕೊಡುಗೆ: ವಿದ್ಯುತ್ ದರದಲ್ಲಿ ಶೇ.50 ಕಡಿತ
, ಮಂಗಳವಾರ, 31 ಡಿಸೆಂಬರ್ 2013 (19:23 IST)
PR
PR
ನವದೆಹಲಿ: ರಾಜಧಾನಿಯಲ್ಲಿ ಶೇ. 50ರಷ್ಟು ವಿದ್ಯುತ್ ದರದ ಕಡಿತಕ್ಕೆ ದೆಹಲಿ ಕ್ಯಾಬಿನೆಟ್ ಇಂದು ಅನುಮೋದನೆ ನೀಡುವ ಮೂಲಕ ದೆಹಲಿ ಜನತೆಗೆ ಹೊಸ ವರ್ಷದ ಕೊಡುಗೆಯನ್ನು ಕೇಜ್ರಿವಾಲ್ ನೀಡಿದ್ದಾರೆ. ದೆಹಲಿ ಕಾರ್ಯಾಲಯದಲ್ಲಿ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ವಿಷಯವನ್ನು ಪ್ರಕಟಿಸಿದರು. ನಾಳೆಯಿಂದ ಅಂದರೆ ಜನವರಿ ಒಂದರಿಂದಲೇ ಇದು ಜಾರಿಗೆ ಬರಲಿದ್ದು, ತಿಂಗಳಿಗೆ 400 ಯೂನಿಟ್‌ವರೆಗೆ ವಿದ್ಯುತ್ ಬಳಸುವ ಮನೆಗಳಿಗೆ ಇವು ಅನ್ವಯವಾಗಲಿದೆ. ವಿದ್ಯುತ್‌ ಬಿಲ್‌ಗಳಲ್ಲಿ ಶೇ. 50ರಷ್ಟು ಕಡಿತ ಅವರ ಚುನಾವಣೆ ಭರವಸೆಗಳಲ್ಲಿ ಒಂದಾಗಿತ್ತು.

ಈ ನಿರ್ಧಾರದಿಂದ 34 ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದ್ದು, ಈ ವಿತ್ತೀಯ ವರ್ಷದಲ್ಲಿ ಸರ್ಕಾರಕ್ಕೆ 60 ಕೋಟಿ ರೂ. ಹೊರೆ ಬೀಳಲಿದೆ. ನಿನ್ನೆ ತಾನೇ ದೆಹಲಿ ಜನತೆಗೆ ಉಚಿತ ನೀರಿನ ಪೂರೈಕೆಯನ್ನು ಕೇಜ್ರಿವಾಲ್ ಘೋಷಿಸಿದ್ದರು. ದೆಹಲಿಯ ಪ್ರತಿಯೊಂದು ಮನೆಗೆ 700 ಲೀಟರ್ ಉಚಿತ ನೀರು ದಿನನಿತ್ಯ ಪೂರೈಕೆಯಾಗಲಿದೆ. ಅದಕ್ಕಿಂತ ಹೆಚ್ಚು ಖರ್ಚು ಮಾಡುವ ಮನೆಗಳು ಇಡೀ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.

Share this Story:

Follow Webdunia kannada