Select Your Language

Notifications

webdunia
webdunia
webdunia
webdunia

ಎಂತಾ ಕಾಲವಯ್ಯ...10 ವರ್ಷದ ಬಾಲಕನಿಂದ 3 ವರ್ಷದ ಬಾಲಕಿಯ ಮೇಲೆ ರೇಪ್

ಎಂತಾ ಕಾಲವಯ್ಯ...10 ವರ್ಷದ ಬಾಲಕನಿಂದ 3 ವರ್ಷದ ಬಾಲಕಿಯ ಮೇಲೆ ರೇಪ್
ನವದೆಹಲಿ , ಸೋಮವಾರ, 31 ಮಾರ್ಚ್ 2014 (18:56 IST)
ಆಘಾತಕಾರಿ ಘಟನೆಯೊಂದರಲ್ಲಿ 10 ವರ್ಷ ವಯಸ್ಸಿನ ಬಾಲಕನೊಬ್ಬ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಗರದ ಅಮನ್ ವಿಹಾರ್ ಪ್ರದೇಶದಲ್ಲಿರುವ ನಿವಾಸದಲ್ಲಿ ಬಾಲಕಿ ಎಕಾಂಗಿಯಾಗಿದ್ದಾಗ ಈ ಘಟನೆ ನಡೆದಿದೆ.

3 ವರ್ಷ ವಯಸ್ಸಿನ ಬಾಲಕಿ ಎಕಾಂಗಿಯಾಗಿ ಮನೆಯಲ್ಲಿದ್ದಾಗ ಮನೆಗೆ ನುಗ್ಗಿದ ಬಾಲಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿ ರೋಧಿಸಲು ಆರಂಭಿಸಿದಾಗ ಬಾಲಕ ಪರಾರಿಯಾಗಿದ್ದಾನೆ. ನೆರೆಮನೆಯಲ್ಲಿ ವಾಸಿಸುತ್ತಿದ್ದ ಬಾಲಕ ಬಾಲಕಿಗೆ ಪರಿಚಿತನಾಗಿದ್ದ ಎನ್ನಲಾಗಿದೆ.

ನೆರೆಹೊರೆಯವರು ಬಾಲಕಿಯ ತಾಯಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದಾಗ, ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Share this Story:

Follow Webdunia kannada