Select Your Language

Notifications

webdunia
webdunia
webdunia
webdunia

ಉಗ್ರ ಕಸಬ್ ವಿಚಾರಣೆಗೆ ಅಮಿಕಸ್ ಕ್ಯೂರಿ?

ಉಗ್ರ ಕಸಬ್ ವಿಚಾರಣೆಗೆ ಅಮಿಕಸ್ ಕ್ಯೂರಿ?
ಮುಂಬೈ , ಶನಿವಾರ, 3 ಜನವರಿ 2009 (20:47 IST)
ND
ಮುಂಬೈ ನರಮೇಧ ನಡೆಸಿರುವ ಉಗ್ರರಲ್ಲಿ ಜೀವಂತ ಸೆರೆಸಿಕ್ಕಿರುವ ಅಜ್ಮಲ್ ಅಮೀರ್ ಕಸಬ್‌ಗೆ ಅಮಿಕಸ್ ಕ್ಯೂರಿ ನೇಮಿಸುವ ಮೂಲಕ ಪ್ರಕರಣದ ವಿಚಾರಣೆ ನಡೆಸಬಹುದು ಎನ್ನಲಾಗಿದೆ. ಮುಂಬೈ ಹೈಕೋರ್ಟಿನಲ್ಲಿ ಪ್ರಕರಣ ಒಂದರ ಕುರಿತು ಇತ್ತೀಚೆಗೆ ಈ ತೀರ್ಪು ನೀಡಲಾಗಿದ್ದು, ಇದರ ಆಧಾರದಲ್ಲಿ ಕಸಬ್‌ಗೂ ಅಮಿಕಸ್ ಕ್ಯೂರಿ ನೇಮಕ ಮಾಡಬಹುದು ಎನ್ನಲಾಗಿದೆ.

ಅಜ್ಮಲ್ ಸ್ವಯಂ ತನ್ನಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಆತ ನ್ಯಾಯಿಕ ಸಹಾಯ ಒದಗಿಸಲು ಪಾಕಿಸ್ತಾನಕ್ಕೆ ಮಾಡಿಕೊಂಡಿರುವ ಮನವಿ ಅರಣ್ಯರೋದನವಾಗಿದೆ. ಹೀಗಿರುವಾಗ ಅಮಿಕಸ್ ಕ್ಯೂರಿ ಒಂದು ಪರಿಹಾರವಾಗಬಹುದು ಎಂದು ಮುಂಬೈ ಹೈಕೋರ್ಟಿನ ಮುಖ್ಯ ಸರ್ಕಾರಿ ವಕೀಲರಾಗಿರುವ ಸತೀಶ್ ಬೋರುಲ್ಕಾರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ಆರೋಪಿಯೊಬ್ಬ ತನಗೆ ವಕೀಲರನ್ನು ನೇಮಿಸಿಕೊಳ್ಳುವಲ್ಲಿ ವಿಫಲವಾಗಿದ್ದರೆ, ಆತನಿಗೆ ಅಮಿಕಸ್ ಕ್ಯೂರಿಯನ್ನು ನೇಮಿಸುವುದು ವಿಚಾರಣಾ ನ್ಯಾಯಾಲಯದ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ಏನಿದು ಅಮಿಕಸ್ ಕ್ಯೂರಿ?
ಅಮಿಕಸ್ ಕ್ಯೂರಿ ಎಂಬುದು ಲ್ಯಾಟಿನ್ ಶಬ್ದ. ಇದರ ವಾಚ್ಯಾರ್ಥ 'ನ್ಯಾಯಾಲಯದ ಸ್ನೇಹಿತ'. ಈತ/ಈಕೆ ಯಾವುದೇ ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಆದರೆ ನ್ಯಾಯಾಲಯಕ್ಕೆ ಸಹಾಯ ಮಾಡುತ್ತಾರೆ.

Share this Story:

Follow Webdunia kannada