Select Your Language

Notifications

webdunia
webdunia
webdunia
webdunia

ಈಗ ಸೂರ್ಯ ನಮಸ್ಕಾರದ ವಿರುದ್ಧ ಫತ್ವಾ: ಇಸ್ಲಾಮ್‌ಗೆ ವಿರೋಧ

ಈಗ ಸೂರ್ಯ ನಮಸ್ಕಾರದ ವಿರುದ್ಧ ಫತ್ವಾ: ಇಸ್ಲಾಮ್‌ಗೆ ವಿರೋಧ
ಭೋಪಾಲ್ , ಗುರುವಾರ, 12 ಜನವರಿ 2012 (09:13 IST)
ND
ಮಧ್ಯಪ್ರದೇಶ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಗುರುವಾರ ವಿಶ್ವದಾಖಲೆಯ 'ಸೂರ್ಯ ನಮಸ್ಕಾರ' ಮಾಡುವ ಕಾರ್ಯಕ್ರಮಕ್ಕೆ ಶತಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ, ಸೂರ್ಯ ನಮಸ್ಕಾರ ವಿರೋಧಿಸಿ ಮುಸ್ಲಿಮ್ ಮುಖಂಡರು ಫತ್ವಾ ಹೊರಡಿಸಿದ್ದಾರೆ.

ಸೂರ್ಯ ನಮಸ್ಕಾರ ಹಾಗೂ ದೇವರನ್ನು ಪೂಜಿಸುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಮುಸ್ಲಿಮ್ ಮುಖಂಡರು, ಇಸ್ಲಾಮ್ ಧರ್ಮದಲ್ಲಿ ಇದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ ಮುಸ್ಲಿಮರು ಪಾಲ್ಗೊಳ್ಳಬಾರದು ಎಂದು ಹುಕುಂ ನೀಡಿರುವ ಶಾಹರ್ ಖ್ವಾಜಿ ಸೈಯದ್ ಮುಶ್ತಾಖ್ ಅಲಿ ನಾದ್ವಿ ಫತ್ವಾ ಹೊರಡಿಸಿದ್ದಾರೆ.

ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಶಿಕ್ಷಣ ಸಂಸ್ಥೆಗಳು ಎಲ್ಲಾ ರೀತಿ ಪ್ರಯತ್ನ ನಡೆಸಿದ್ದು, ಈ ಮೂಲಕ ಗಿನ್ನೆಸ್ ದಾಖಲೆ ಬರೆಯಬೇಕೆಂಬ ಇರಾದೆ ಹೊಂದಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.

ಹಾಗಾಗಿ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ. ಯಾಕೆಂದರೆ ಇದು ಗಿನ್ನೆಸ್ ರೆಕಾರ್ಡ್ ಮಾಡುವ ಉದ್ದೇಶದಿಂದ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಇಲಾಖೆ ಕೋರಿದೆ.

ಆದರೆ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಸೂರ್ಯ ನಮಸ್ಕಾರ ಇದೊಂದು ಯೋಗಾಭ್ಯಾಸದ ಭಾಗ ಇದ್ದಂತೆ. ಇದರಿಂದ ಆರೋಗ್ಯವನ್ನು ಮತ್ತಷ್ಟು ಸುಧಾರಿಸಿಕೊಳ್ಳಬಹುದು. ಆದರೆ ಯಾರಿಗೆ ಇದರಲ್ಲಿ ಪಾಲ್ಗೊಳ್ಳಲು ಮನಸ್ಸಿಲ್ಲವೋ ಅಂತವರು ಇದರಿಂದ ದೂರ ಉಳಿಯಬಹುದು ಎಂದು ರಾಜ್ಯ ಶಿಕ್ಷಣ ಸಚಿವೆ ಅರ್ಚನಾ ಚಿಟ್ನಿಸ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Share this Story:

Follow Webdunia kannada