Webdunia - Bharat's app for daily news and videos

Install App

ಈಗ ಕರಾಟೆಯಲ್ಲಿ ಸಮಯ 'ಕೊಲ್ಲು'ತ್ತಿದ್ದಾನೆ ಹಂತಕ ಕಸಬ್!

Webdunia
ಗುರುವಾರ, 10 ಮಾರ್ಚ್ 2011 (08:17 IST)
PTI
26 /11ರ ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿ ಮರಣ ದಂಡನೆಗೆ ಗುರಿಯಾಗಿರುವ ಪಾಕಿಸ್ತಾನದ ಉಗ್ರಗಾಮಿ ಮೊಹಮದ್ ಅಜ್ಮಲ್ ಅಮೀರ್ ಕಸಬ್ ಈಗ ಆತ್ಮರಕ್ಷಣಾ ಕಲೆಯಾದ ಕರಾಟೆ ಅಭ್ಯಾಸ ಮಾಡುತ್ತಿದ್ದಾನೆ. ಈಗಾಗಲೇ ಮುಗ್ಧ ಜನರ ಮಾರಣ ಹೋಮ ಮಾಡಿರುವ ಈತ ಈ ಆತ್ಮರಕ್ಷಣಾ ಕಲೆಯೊಂದಿಗೆ, ವ್ಯಾಯಾಮವನ್ನೂ ಮಾಡುತ್ತಿದ್ದಾನಂತೆ.

ಇದುವರೆಗೆ ಜನರನ್ನು ಕೊಂದಿದ್ದ ಆತ, ಈಗ ಸಮಯ ಕೊಲ್ಲಲು ಈ ರೀತಿ ಮಾಡುತ್ತಿದ್ದಾನೆ ಎನ್ನುತ್ತಾರೆ ಆತನಿರುವ ಆರ್ಥರ್ ರೋಡ್ ಜೈಲಧಿಕಾರಿಗಳು. ಈಗಾಗಲೇ ಆತನ ರಕ್ಷಣೆಗಾಗಿ ಭಾರೀ ಭದ್ರತೆಯ ಈ ಜೈಲಿನಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಭದ್ರತಾ ಜವಾನರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ, ಆತ್ಮರಕ್ಷಣೆಯ ಕಲೆ ಅವನಿಗೆ ಅಗತ್ಯವಿಲ್ಲ.

ಆದರೆ, ಈತನಿಗೆ ಕರಾಟೆ ಚೆನ್ನಾಗಿ ಗೊತ್ತಿರುವಂತಿದೆ ಎಂದೂ ಹೇಳುತ್ತಿದ್ದಾರೆ ಜೈಲಿನ ಅಧಿಕಾರಿ.

ಮುಗ್ಧರ ಮಾರಣಹೋಮ ಮಾಡಿದ ಉಗ್ರಗಾಮಿಗಳಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿಯಾದ ಈತ ಇರುವುದು ಜೈಲಿನೊಳಗಿರುವ ಬಾಂಬ್-ಪ್ರೂಫ್ ಅಂಡಾ (ಮೊಟ್ಟೆಯಾಕಾರದ) ಸೆಲ್‌ನಲ್ಲಿ. ಆತನನ್ನು ಪುಣೆಯ ಯರವಾಡ ಜೈಲಿಗೆ ವರ್ಗಾಯಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಕಸಬ್ ವಾಚಾಳಿಯಂತೆ ಮಾತನಾಡುತ್ತಿದ್ದಾನಂತೆ. ಆದರೆ ಭದ್ರತಾ ಗಾರ್ಡುಗಳು ಆತನಲ್ಲಿ ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ನೀವೆಲ್ಲಾ ಎಲ್ಲಿಯವರು, ಎಷ್ಟು ಸಮಯದಿಂದ ಇಲ್ಲಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಆತ ಕೇಳುತ್ತಲೇ ಇರುತ್ತಾನೆ ಎಂದಿದ್ದಾರೆ ಅಧಿಕಾರಿ.

ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ಭಾರತೀಯ ಪಿತೂರಿಕೋರರಾದ ಫಾಹಿಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ಖುಲಾಸೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದ್ದ ಹೈಕೋರ್ಟು, ಕಸಬ್‌ಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಎತ್ತಿ ಹಿಡಿದಿತ್ತು. ಬಾಂಬೇ ಹೈಕೋರ್ಟ್ ಈ ತೀರ್ಪನ್ನು ಆತ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Video: ಆಪರೇಷನ್ ಸಿಂಧೂರ್ ಶೌರ್ಯದ ಬಗ್ಗೆ ಹೇಳಿದ್ರೆ ವಿಪಕ್ಷಗಳು ಮೇಜು ತಟ್ಟಲ್ಲ ಯಾಕೆ: ಅನುರಾಗ್ ಠಾಕೂರ್

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Show comments