Webdunia - Bharat's app for daily news and videos

Install App

ಇಂದು ವಾಜಪೇಯಿ ಜನ್ಮದಿನಾಚರಣೆ

Webdunia
ಶುಕ್ರವಾರ, 25 ಡಿಸೆಂಬರ್ 2009 (17:13 IST)
PTI
ಇಂದು ಮಹಾನ್ ಮುತ್ಸದ್ದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ.1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲೀಯರ್‌ನಲ್ಲಿ ಜನ್ಮತಾಳಿದರು.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ವಾಜಪೇಯಿ ಸುಮಾರು 50 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.

ಗ್ವಾಲೀಯರ್‌ನ ಲಕ್ಷ್ಮಿಬಾಯಿ ಕಾಲೇಜ್‌ನಲ್ಲಿ ಪಾಲಿಟಿಕಲ್ ಸೈನ್ಸ್‌ನಲ್ಲಿ ತಮ್ಮ ಮಾಸ್ಟರ್ ಡಿಗ್ರಿಯನ್ನು ಪೂರೈಸಿದರು. ಕವಿತೆ ರಚನಾಕಾರರಾಗಿ ಉತ್ತಮ ಹೆಸರುಗಳಿಸಿದರು.

1942-45 ರ ಅವಧಿಯಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ವಾಜಪೇಯಿ ಆರಂಭದಲ್ಲಿ ಕಮ್ಯೂನಿಸ್ಟ್ ಪರವಾಗಿದ್ದರು. ನಂತರ ನಿಧಾನವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದತ್ತ ವಾಲಿದರು.

ಸುಮಾರು 50 ವರ್ಷಗಳವರೆಗೆ ಸಂಸದರಾಗಿ ಸಚಿವರಾಗಿ ಸೇವೆ ಸಲ್ಲಿಸಿದರೂ ಭ್ರಷ್ಟಚಾರದಿಂದ ದೂರವಿದ್ದು, ಮೌಲ್ಯಾಧಾರಿ ತ, ಅಪರೂಪದ ರಾಜಕಾರಣಿ ಎನ್ನುವ ಹೊಗಳಿಕೆಗೆ ಕಾರಣರಾದರು.

1996 ರಲ್ಲಿ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ನಂತರ 1998 ಅಕ್ಚೋಬರ್ 13 ರಿಂದ 2004 ಮೇ.19 ರವರೆಗೆ ಎರಡನೇ ಬಾರಿಗೆ ಪ್ರಧಾನಿಯಾಗುವ ಅವಕಾಶ ಗಿಟ್ಟಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments