Select Your Language

Notifications

webdunia
webdunia
webdunia
webdunia

ಇಂಡಿಯನ್ ಮುಜಾಹಿದ್ದೀನ್‌ ಹಿಟ್‌ ಲಿಸ್ಟ್‌ನಲ್ಲಿ ನರೇಂದ್ರ ಮೋದಿ ಟಾರ್ಗೆಟ್‌ : ’ಮಚಲಿ 5’ ಕೋಡ್‌ ನಂಬರ್‌

ಇಂಡಿಯನ್ ಮುಜಾಹಿದ್ದೀನ್‌ ಹಿಟ್‌ ಲಿಸ್ಟ್‌ನಲ್ಲಿ ನರೇಂದ್ರ ಮೋದಿ ಟಾರ್ಗೆಟ್‌ : ’ಮಚಲಿ 5’ ಕೋಡ್‌ ನಂಬರ್‌
ರಾಂಚಿ , ಗುರುವಾರ, 31 ಅಕ್ಟೋಬರ್ 2013 (15:52 IST)
PTI
PTI
ಸದ್ಯಕ್ಕೆ ಹೊರ ಬಿದ್ದಿರುವ ಭಯಾನಕ ಮಾಹಿತಿಯ ಪ್ರಕಾರ, ಉಗ್ರರ ಹಿಟ್‌ ಲಿಸ್ಟ್‌ನಲ್ಲಿ ಇರುವ ಮೊಟ್ಟ ಮೊದಲ ಭಾರತೀಯ ಪ್ರಭಾವಿ ರಾಜಕಾರಣಿಯ ಹೆಸರು ನರೇಂದ್ರ ಮೋದಿ. ಮುಂದಿನ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಇಂಡಿಯನ್ ಮುಜಾಹಿದ್ದೀನ್‌ ಉಗ್ರರು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದು, ನರೇಂದ್ರ ಮೋದಿಗೆ ’ಮಚಲಿ 5’ ಎಂದು ಕೋಡ್‌ ವರ್ಡ್ ಕೊಟ್ಟಿದ್ದಾರೆ. ಇದೆಲ್ಲವನ್ನು ಬಾಯಿ ಬಿಟ್ಟಿದ್ದು ಸ್ವತಃ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಭಯೋತ್ಪಾದಕ ಉಗ್ರ.

ಪಾಟ್ನಾ ಬಾಂಬ್ ಬ್ಲಾಸ್ಟ್‌ನಲ್ಲಿ ಸಮಯದಲ್ಲಿ ಪೋಲೀಸರ ಕೈಗೆ ಸಿಕ್ಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರ ಇಮ್ತಿಯಾಜ್‌ ಅನ್ಸಾರಿ ಇನ್ನಷ್ಟು ಭಯಾನಕ ಸತ್ಯಾಂಶಗಳನ್ನು ಹೊರ ಹಾಕಿದ್ದಾನೆ. ಇಂಡಿಯನ್‌ ಮುಜಾಹಿದ್ದೀನ್ ಉಗ್ರರ ಹಿಟ್‌ ಲೀಸ್ಟ್‌ನಲ್ಲಿ ನರೇಂದ್ರ ಮೋದಿಯೇ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಅಷ್ಟೆ ಅಲ್ಲ, ಇತರೇ ಉಗ್ರ ಸಂಘಟನೆಗಳು ಕೂಡ ನರೇಂದ್ರ ಮೋದಿಯವರನ್ನು ಕೊಲ್ಲಲು ತಂತ್ರ ರೂಪಿಸುತ್ತಿವೆ. ಒಟ್ಟಾರೆಯಾಗಿ ನರೇಂದ್ರ ಮೋದಿ ಇದೀಗ ಫುಲ್ ರಿಸ್ಕ್‌ನಲ್ಲಿ ಇದ್ದಾರೆ ಎಂದು ಬಂಧಿತ ಉಗ್ರ ಇಮ್ತಿಯಾಜ್‌ ಅನ್ಸಾರಿ ಬಾಯಿ ಬಿಟ್ಟಿದ್ದಾನೆ.

ಉಗ್ರ ಬಾಯಿ ಬಿಟ್ಟ ಇನ್ನಷ್ಟು ಸತ್ಯಗಳು ಮುಂದಿನ ಪುಟದಲ್ಲಿ....

webdunia
PTI
PTI
ನರೇಂದ್ರ ಮೋದಿಯನ್ನು ಕೊಲ್ಲುವ ಹುನ್ನಾರ ಇಟ್ಟುಕೊಂಡೆ ಪಾಟ್ನಾದ ಗಾಂಧಿ ಮೈದಾನದಲ್ಲಿ 18 ಬಾಂಬ್‌ಗಳನ್ನು ಹುದುಗಿಸಿ ಇಟ್ಟಿದ್ದೆವು. ಆದ್ರೆ ಅದೃಷ್ಟವಶಾತ್‌ ಮೋದಿ ಬದುಕುಳಿದುಬಿಟ್ಟಿದ್ದಾರೆ ಎಂದು ಉಗ್ರ ಹೇಳಿದ್ದಾನೆ.

ಈ ಹಿಂದೆ ಬಂಧಿತನಾಗಿದ್ದ ಯಾಸಿನ್ ಭಟ್ಕಳ್‌ ಕೂಡ ಇದೇ ಮಾಹಿತಿಯನ್ನು ಹೊರ ಹಾಕಿದ್ದ. ನರೇಂದ್ರ ಮೋದಿ ಉಗ್ರರ ಹಿಟ್‌ ಲಿಸ್ಟ್‌ನಲ್ಲಿ ಇದ್ದಾರೆ ಎಂದು ಈ ಮೊದಲೇ ಹೇಳಿದ್ದ. ಕೇವಲ ಇಂಡಿಯನ್ ಮುಜಾಹಿದ್ದೀನ್ ಮಾತ್ರವಲ್ಲ, ಬಹುಸಂಖ್ಯಾತ ಉಗ್ರ ಸಂಘಟನೆಗಳು ನರೇಂದ್ರ ಮೋದಿಯನ್ನು ಕೊಲ್ಲಲು ವಿವಿಧ ಬಗೆಯ ಆಪರೇಷನ್‌ಗಳನ್ನು ಹಾಕಿಕೊಂಡಿವೆ ಎಂಬುದಾಗಿ ಯಾಸಿನ್ ಭಟ್ಕಳ್ ಮಾಹಿತಿ ನೀಡಿದ್ದ, ಹೀಗಿದ್ದಾಗ್ಯೂ ಕೂಡ ಮೋದಿಗೆ ಸೂಕ್ತ ಮತ್ತು ಸಮರ್ಥವಾದ ಭದ್ರತೆಯನ್ನು ಸ್ಥಳೀಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನೀಡದೇ ಇರುವುದು ಖೇದನೀಯವಾಗಿದೆ.

ರಾಜಕೀಯ ವಿಚಾರವನ್ನು ಹೊರತು ಪಡಿಸಿ, ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಸೂಕ್ತ ಮತ್ತು ಸಮರ್ಥ ಭದ್ರತೆಯನ್ನು ಒದಗಿಸದೇ ಇರುವುದು ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರ್ಕಾರದ ನಿರ್ಲಕ್ಷಗಳು ಮತ್ತು ರಾಜಕೀಯ ಕಿತ್ತಾಟದಿಂದ ಅಮಾಯಕರು ಜೀವ ಬಿಟ್ಟಿದ್ದು ನಿಜಕ್ಕೂ ದೊಡ್ಡ ದುರಂತವೇ ಸರಿ.

Share this Story:

Follow Webdunia kannada