Select Your Language

Notifications

webdunia
webdunia
webdunia
webdunia

ಆಯುರ್ವೇದ ಹಗರಣ: ಮುಲಾಯಂ ವಿರುದ್ಧ ಸಿಬಿಐ ತನಿಖೆ

ಆಯುರ್ವೇದ ಹಗರಣ: ಮುಲಾಯಂ ವಿರುದ್ಧ ಸಿಬಿಐ ತನಿಖೆ
ಲಕ್ನೋ , ಶುಕ್ರವಾರ, 6 ಏಪ್ರಿಲ್ 2012 (12:07 IST)
PTI
ಎನ್‌ಆರ್‌ಎಚ್‌ಎಂ 5700 ಕೋಟಿ ರೂಪಾಯಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, 1993 ಮತ್ತು 1995ರ ಅವಧಿಯಲ್ಲಿ ಮುಲಾಯಂಸಿಂಗ್ ಯಾದವ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ನಡೆದ 26 ಕೋಟಿ ರೂಪಾಯಿಗಳ ಆಯುರ್ವೇದ ಹಗರಣಕ್ಕೆ ಹೊಸ ತಿರುವು ನೀಡಿದೆ.

ಉತ್ತರಪ್ರದೇಶದ ಪಂಚಾಯತ್ ರಾಜ್ ಖಾತೆ ಸಚಿವ ಬಲರಾಮ್ ಸಿಂಗ್ ಯಾದವ್ ಬಗ್ಗೆ ವಿಚಾರಣೆ ನಡೆಸುವಂತೆ ಸಿಬಿಐ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. ಮುಲಾಯಂ ನಂಬಿಕಸ್ತ ಯಾದವ್ ಕೂಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಎನ್‌ಆರ್‌ಎಚ್‌ಎಂ ಹಗರಣದೊಂದಿಗೆ ಆಯುರ್ವೇದ ಹಗರಣವನ್ನು ಕೂಡಾ ತನಿಖೆಗೆ ನಡೆಸುವಂತೆ ಸಿಬಿಐಗೆ ನ್ಯಾಯಾಲಯ ಆದೇಶಿಸಿದೆ.

Share this Story:

Follow Webdunia kannada