Select Your Language

Notifications

webdunia
webdunia
webdunia
webdunia

ಅಸಭ್ಯವಾಗಿ ವರ್ತಿಸಿದ ಯುವಕನಿಗೆ ನಟಿ ನಗ್ಮಾ ಕಪಾಳಮೋಕ್ಷ

ಅಸಭ್ಯವಾಗಿ ವರ್ತಿಸಿದ ಯುವಕನಿಗೆ ನಟಿ ನಗ್ಮಾ ಕಪಾಳಮೋಕ್ಷ
ಮೀರತ್ , ಶುಕ್ರವಾರ, 28 ಮಾರ್ಚ್ 2014 (14:19 IST)
PR
ಉತ್ತರಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಾಲಿವುಡ್ ನಟಿ ಕಾಂಗ್ರೆಸ್ ಅಭ್ಯರ್ಥಿ ನಗ್ಮಾ, ಅನುಚಿತವಾಗಿ ವರ್ತಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.

ಕಳೆದ ವಾರ ಕಾಂಗ್ರೆಸ್ ಪಕ್ಷದ ಶಾಸಕನೊಬ್ಬ ನಟಿ ನಗ್ಮಾಗೆ ಚುಂಬಿಸಲು ಯತ್ನಿಸಿದಾಗ ಆಕ್ರೋಶಗೊಂಡ ನಗ್ಮಾ ಸಭೆಯಲ್ಲಿ ಪಾಲ್ಗೊಳ್ಳದೆ ತೆರಳಿದ್ದರು.

ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಹೆಚ್ಚಾಗಿ ವಾಸಿಸುವ ಜಾಲಿಕೋಠಿ ಪ್ರದೇಶಕ್ಕೆ ನಗ್ಮಾ ಚುನಾವಣಾ ಪ್ರಚಾರಕ್ಕೆ ಭೇಟಿ ನೀಡಿದಾಗ ತಮ್ಮನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದಲ್ಲಿ ಮತ್ತೆ ನಾನು ಮೀರತ್ ನಗರಕ್ಕೆ ಪ್ರಚಾರಕ್ಕೆ ಬರುವುದಿಲ್ಲ ಎಂದು ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Share this Story:

Follow Webdunia kannada