Select Your Language

Notifications

webdunia
webdunia
webdunia
webdunia

ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ 6 ಸಂಸದರ ಉಚ್ಚಾಟನೆ

ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ 6 ಸಂಸದರ ಉಚ್ಚಾಟನೆ
, ಮಂಗಳವಾರ, 11 ಫೆಬ್ರವರಿ 2014 (19:35 IST)
PR
PR
ನವದೆಹಲಿ: ಸೀಮಾಂಧ್ರ ಪರ ಸಂಸತ್ ಸದಸ್ಯರಿಗೆ ಚಾಟಿ ಬೀಸಿರುವ ಕಾಂಗ್ರೆಸ್ ಪಕ್ಷ ಮಂಗಳವಾರ 6 ಮಂದಿ ಲೋಕಸಭೆ ಸದಸ್ಯರನ್ನು ಉಚ್ಚಾಟನೆ ಮಾಡಿದೆ. 6 ಮಂದಿ ಸೀಮಾಂಧ್ರ ಸದಸ್ಯರು ತೆಲಂಗಾಣ ರಚನೆಯನ್ನು ವಿರೋಧಿಸಿ, ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉಚ್ಚಾಟಿಸಿದ ಸಂಸದರು ಸಬಾಂ ಹರಿ, ಹರ್ಷಕುಮಾರ್, ವಿ. ಅರುಣ್ ಕುಮಾರ್, ಎಲ್. ರಾಜಗೋಪಾಲ್, ಸಾಂಬಶಿವ ರಾವ್ ಮತ್ತು ಸಾಯಿ ಪ್ರತಾಪ್. 6 ಸಂಸದರನ್ನು ಉಚ್ಚಾಟಿಸುವ ಎಐಸಿಸಿ ಶಿಸ್ತು ಸಮಿತಿಯ ನಿರ್ಧಾರಕ್ಕೆ ಸೋನಿಯಾ ಅನುಮೋದನೆ ನೀಡಿದರು ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವೇ ದಿನಗಳಲ್ಲಿ ತೆಲಂಗಾಣ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸುವ ಸುಳಿವು ಸಿಕ್ಕಿದ್ದು, ಸಭಾಂ ಹರಿ ಮತ್ತು ಇತರೆ ಸದಸ್ಯರು ಕೆಲವು ದಿನಗಳ ಹಿಂದೆ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ್ದರು.ಸಂಸದರನ್ನು ಉಚ್ಚಾಟಿಸುವ ನಿರ್ಧಾರದೊಂದಿಗೆ, ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸೇರಿದಂತೆ ಪಕ್ಷದ ಸಂಸದರಿಗೆ ಪ್ರಬಲವಾದ ಸಂದೇಶ ಕಳಿಸಿದ್ದಾರೆ.

Share this Story:

Follow Webdunia kannada