Select Your Language

Notifications

webdunia
webdunia
webdunia
webdunia

ಅರವಿಂದ್ ಕೇಜ್ರಿವಾಲ್ ಐಟಂ ಬಾಯ್: ನುಲಿದ ರಾಖಿ ಸಾವಂತ್

ಅರವಿಂದ್ ಕೇಜ್ರಿವಾಲ್ ಐಟಂ ಬಾಯ್: ನುಲಿದ ರಾಖಿ ಸಾವಂತ್
ಮುಂಬೈ , ಶುಕ್ರವಾರ, 24 ಜನವರಿ 2014 (15:12 IST)
PR
ವಿವಾದಾತ್ಮಕ ಹೇಳಿಕೆಗಳಿಂದ ಖ್ಯಾತಿಪಡೆದ ಐಟಂ ಗರ್ಲ್ ರಾಖಿ ಸಾವಂತ್, ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಐಟಂ ಬಾಯ್ ಎಂದು ಹೇಳಿಕೆ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಐಟಂ ನೃತ್ಯ ಮಾಡುವ ಅವಕಾಶ ದೊರೆತಲ್ಲಿ ದಮ್ ಚಿತ್ರದ ಬಾಬೂಜಿ ಜರಾ ಧೀರೆ ಚಲೋ, ಬಿಜಲಿ ಖಡಿ ಯಹಾ ಬಿಜಲಿ ಖಡಿ ಎನ್ನುವ ಹಾಡಿಗೆ ನೃತ್ಯ ಮಾಡುವುದಾಗಿ ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗಿಂತ ಐಟಂ ಗರ್ಲ್ ರಾಖಿ ಸಾಂವತ್ ಉತ್ತಮ ಅಡಳಿತ ನೀಡಬಲ್ಲಳು ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಹೇಳಿಕೆ ನೀಡಿದ ನಂತರ ರಾಖಿ ಸಾವಂತ್ ಹೇಳಿಕೆ ಹೊರಬಿದ್ದಿದೆ.

ಶಿವಸೇನೆಯ ಮುಖವಾಣಿಯಾದ ಸಾಮ್ನಾ ಪತ್ರಿಕೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಐಟಂ ಗರ್ಲ್‌ನಂತೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ ನಂತರ ಒತ್ತಡ ಬಂದಾಗ ಕ್ಷಮೆಯಾಚಿಸಿದ್ದರು ಎಂದು ಉದ್ಭವ್ ಠಾಕ್ರೆ ಲೇವಡಿ ಮಾಡಿದ್ದಾರೆ.

Share this Story:

Follow Webdunia kannada