Webdunia - Bharat's app for daily news and videos

Install App

ಅಯ್ಯಯ್ಯೋ.. ತೆ(ಹಲ್ಕಾ) ತೇಜ್ಪಾಲ್ ಮಾಡಿದ್ದು ಲೈಂಗಿಕ ಕಿರುಕುಳವಲ್ಲ... ರೇಪ್...?

Webdunia
ಶುಕ್ರವಾರ, 29 ನವೆಂಬರ್ 2013 (18:15 IST)
PTI
PTI
ತರುಣ್ ತೇಜ್‌ಪಾಲ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಆದ್ರೆ ಕೇವಲ ಕಿರುಕುಳ ಕೊಡಲಾಗಿದೆ ಎಂಬ ಮಾತುಗಳು ಮಾತ್ರ ಕೇಳಿ ಬರುತ್ತಿವೆ. ನಾನು ತೇಜ್ಪಾಲ್‌ನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಲೈಂಗಿಕ ಕಿರುಕುಳಕ್ಕೊಳಗಾದ ತೆಹಲ್ಕಾ ಮಾಜಿ ಪತ್ರಕರ್ತೆ ಹೇಳಿದ್ದಾರೆ.

ಪತ್ರಕರ್ತೆ ಶೋಮಾ ಚೌಧರಿ ಇಂದು ಗೋವಾ ಪೊಲೀಸರಿಗೆ ನೀಡಿರುವ 2 ಪುಟಗಳ ಹೇಳಿಕೆಯಲ್ಲಿ ತೇಜ್‌ಪಾಲ್ ವಿರುದ್ಧ ಈ ರೀತಿಯ ಆರೋಪವನ್ನು ಮಾಡಿದ್ದಾರೆ. 'ನನ್ನ ಮೇಲೆ ತೇಜ್‌ಪಾಲ್ ನಡೆಸಿದ್ದು ಅತ್ಯಾಚಾರ. ಆತ ನನ್ನ ವಿರುದ್ಧ ನಡೆದುಕೊಂಡಿರುವ ರೀತಿಯನ್ನು ಕಾನೂನಿನ ಪ್ರಕಾರ ಅತ್ಯಾಚಾರವೆಂದೇ ಪರಿಗಣಿಸಲಾಗುತ್ತದೆ. ಆದರೆ ಕೆಲವರು ಇದನ್ನು ಚುನಾವಣೆಯ ಹಿನ್ನಲೆಯನ್ನಾಗಿ ಬಣ್ಣಿಸುತ್ತಿದ್ದಾರೆ ಎಂದು ಅವಲತ್ತುಕೊಂಡರು.

ಅಷ್ಟೇ ಅಲ್ಲ, ಇದನ್ನು ರಾಜಕೀಯಗೊಳಿಸಲು ಕೆಲವು ಪ್ರಭಾವಿಗಳು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಯಾವುದೇ ರಾಜಕೀಯ ದುರಾದೃಷ್ಟಿಯನ್ನು ಇಟ್ಟುಕೊಂಡು ನಾನು ಈ ಆರೋಪ ಹೊರಿಸುತ್ತಿಲ್ಲ. ನನ್ನ ಮೇಲೆ ನಡೆದ ಅತ್ಯಾಚಾರದ ವಿರುದ್ಧ ನಾನು ಸಿಡಿದೆದ್ದಿದ್ದೇನೆ. ಇದು ನನ್ನ ಸ್ವಾಭಿಮಾನಕ್ಕಾಗಿ ನಾನು ನಡೆಸುತ್ತಿರುವ ಹೋರಾಟವೇ ಹೊರತು, ಯಾವುದೇ ರಾಜಕೀಯ ದುರುದ್ದೇಶ ಇದರಲ್ಲಿ ಇಲ್ಲ ಎಂದು ಶೋಮಾ ಚೌಧರಿ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ತೇಜ್ಪಾಲ್ ಬಂಧನವಾಗುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ