ಯಾರಾದ್ರೂ ಅತ್ಯಾಚಾರ ಮಾಡಲು ಪ್ರಯತ್ನಿಸಿದರೆ, ಸಹಾಯಕ್ಕೆ ಅಂತ ಪೋಲೀಸರನ್ನು ಆಶ್ರಯಿಸ್ತೀವಿ.. ಆದ್ರೆ ಇಲ್ಲಿ ಪೋಲೀಸರೇ ಗ್ಯಾಂಗ್ ರೇಪ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಮಹಿಳೆಯ ಮೇಲೆ ನೆನ್ನೆ ನಾಲ್ವರು ಕಾಮುಕರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ನನ್ನೆ ರಾತ್ರಿಯ ವೇಳೆಯಲ್ಲಿ ಮಹಿಳೆಯ ಕೋಣೆಗೆ ನುಗ್ಗಿದ ಆಘಂತುಕರು ಒಳಗಿದ್ದ ಮಹಿಳೆಯ ಮೇಲೆ ಸಾಮೂಹಿಕವಾಗಿ ಎರಗಿದ್ದಾರೆ. ಅಷ್ಟೇ ಅಲ್ಲ, ಮದವೇರಿದ ಕಾಮಾಂಧರು ಸಾಮೂಹಿಕವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೋಲೀಸರು "ಇಬ್ಬರು ಪೋಲೀಸ್ ಪೇದೆಗಳನ್ನು" ಬಂಧಿಸಿದ್ದಾರೆ. ಇನ್ನುಳಿದ ಕಾಮಾಂಧರು ಯಾರಿಗೂ ಸಿಗದಂತೆ ಎಸ್ಕೇಪ್ ಆಗಿದ್ದು, ಅವರಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ.