Select Your Language

Notifications

webdunia
webdunia
webdunia
webdunia

ಅಬ್ಬಾ, 18 ಕೆಜಿ ಬಂಗಾರದ ಬಿಸ್ಕಿಟ್ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರು!

ಅಬ್ಬಾ, 18 ಕೆಜಿ ಬಂಗಾರದ ಬಿಸ್ಕಿಟ್ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರು!
, ಶುಕ್ರವಾರ, 20 ಡಿಸೆಂಬರ್ 2013 (17:28 IST)
PR
PR
ಹೈದರಾಬಾದ್: ಆಂಧ್ರದ ಶಂಷಾಬಾದ್ ಏರ್‌ಪೋರ್ಟ್‌ನಲ್ಲಿ ಮೂವರು ಕಳ್ಳ ಸಾಗಾಣಿಕೆದಾರರನ್ನು ಸೆರೆಹಿಡಿದು ಅಕ್ರಮವಾಗಿ ಸಾಗಿಸುತ್ತಿದ್ದ 18 ಕೆಜಿ ಬಂಗಾರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಟೈಗರ್ ಏರ್‌ವೇಸ್ ವಿಮಾನ ಮೂಲಕ ಇದನ್ನು ಸಾಗಾಣಿಕೆ ಮಾಡುತ್ತಿದ್ದರು. 6 ಕೋಟಿ ರೂ. ಮೌಲ್ಯದ ಬಂಗಾರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅತ್ಯೆಧಿಕ ಪ್ರಮಾಣದ ಬಂಗಾರದ ಬಿಸ್ಕೆಟ್‌ಗಳನ್ನು ಪ್ಯಾಂಟ್‌ಗಳಲ್ಲಿ, ಷರ್ಟ್‌ಗಳನ್ನು ಬಚ್ಚಿಟ್ಟುಕೊಂಡು ಸಾಗಿಸಲು ಯತ್ನಿಸಿದಾಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು.

ಬಂಧಿತರಿಂದ ಪೊಲೀಸರು ಪಾಸ್‌ಪೋರ್ಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ಏರ್‌ಪೋರ್ಟ್‌ನಲ್ಲಿ ಹೆಚ್ಚು ಕಳ್ಳಸಾಗಾಣಿಕೆ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

Share this Story:

Follow Webdunia kannada