Webdunia - Bharat's app for daily news and videos

Install App

ಅಬ್ದುಲ್ ಕಲಾಂ ಇ-ಪೇಪರ್ ಬಿಡುಗಡೆ

Webdunia
ಶುಕ್ರವಾರ, 30 ನವೆಂಬರ್ 2007 (18:41 IST)
PTI
ರಾಷ್ಟ್ರಪತಿ ಭವನವನ್ನು ತ್ಯಜಿಸಿದ ಬಳಿಕವೂ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿಕೊಂಡಿರುವ ಭಾರತದ ಕ್ಷಿಪಣಿ ಜನಕ ಎ.ಪಿ.ಜೆ.ಅಬ್ದುಲ್ ಕಲಾಂ ಶುಕ್ರವಾರ ದ್ವೈಮಾಸಿಕ ಇ-ಪೇಪರ್ "'ಬಿಲಿಯನ್ ಬೀಟ್ಸ್" ಬಿಡುಗಡೆ ಮಾಡುವ ಮೂಲಕ ಮಾಧ್ಯಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಭಾರತದ ಯಶಸ್ಸಿನ ಕಥೆಗಳ ಬಗ್ಗೆ ಗಮನಸೆಳೆಯಲು ಮತ್ತು ಜ್ಞಾನ ಸೇತುವನ್ನು ಸ್ಥಾಪಿಸಲು ಕಲಾಂ ಇದನ್ನು ಹೊರತರುತ್ತಿದ್ದಾರೆ.

ರಾಷ್ಟ್ರದ ಯಶಸ್ಸಿನ ಕಥೆಗಳ ಬಗ್ಗೆ ಗಮನಸೆಳೆಯುವಲ್ಲಿ ಭಾರತದ ಮಾಧ್ಯಮದ ವೈಫಲ್ಯದ ಬಗ್ಗೆ ಹತಾಶರಾಗಿರುವ ಕಲಾಂ ತಮ್ಮ ಸಂಗಡಿಗರ ಜತೆ ವೆಬ್‌ಸೈಟ್‌ನಲ್ಲಿ ಇ-ಪೇಪರ್ www.abdulkalam.com ಹುಟ್ಟುಹಾಕಿದ್ದಾರೆ. ಪ್ರತಿಯೊಂದು ಚಟುವಟಿಕೆಯ ಕ್ಷೇತ್ರದಲ್ಲಿ ಯಶಸ್ಸಿನ ದ್ವೀಪಗಳ ಕಥೆಗಳಿದ್ದು, ಅವುಗಳಿಗೆ ಸಂಪರ್ಕ ಕಲ್ಪಿಸಿ ಸರಮಾಲೆಯನ್ನು ನಿರ್ಮಿಸಬೇಕು ಎಂದು ತಮ್ಮ ಸಂಗಡಿಗರಾದ ವಿ. ಪೊನ್‌ರಾಜ್ ಇ-ಪೇಪರ್‌ನ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೇಳಿದರು.

ನವದೆಹಲಿಯಲ್ಲಿ ದೂರದರ್ಶನದ ಸಂದರ್ಶನದಿಂದ ಹೊರಬರುವಾಗ ಸ್ವಂತ ಮಾಧ್ಯಮವನ್ನು ರಚಿಸುವ ಕಲ್ಪನೆ ಅವರಿಗೆ ಹೊಳೆಯಿತು. ಸ್ಟುಡಿಯೊದಿಂದ ಹೊರಬಂದ ಕೂಡಲೇ ಸಾಧಕರ ಯಶಸ್ಸಿನ ಕಥೆಗಳ ಬಗ್ಗೆ ನಾವೇಕೆ ಗಮನಸೆಳೆಯುತ್ತಿಲ್ಲ, ನಾವೇಕೆ ಸುಪ್ತ ನಾಯಕರನ್ನು ಮುಂಚೂಣಿಗೆ ತರುತ್ತಿಲ್ಲ ಎಂದು ತಮ್ಮ ಸಂಗಡಿಗರ ಜತೆ ಹತಾಶೆಯನ್ನು ತೋಡಿಕೊಂಡರು.

ರಾಜಕೀಯದ ಸುದ್ದಿಗಳು, ಹತ್ಯೆ ಮತ್ತು ಜಾತಿ ಸಂಘರ್ಷಗಳ ಸುದ್ದಿಗಳ ವಿಜೃಂಭಣೆಯೇಕೆ ಎಂದು ಕಲಾಂ ಹೇಳಿದ್ದಾಗಿ ನ್ಯಾಷನಲ್ ಅಫೇರ್ಸ್ ಸಂಪಾದಕ ಎಂ. ಅನಂತಕೃಷ್ಣನ್ ಉದ್ಘಾಟನಾ ಸಂಚಿಕೆಯಲ್ಲಿ ಮಾಜಿ ರಾಷ್ಟ್ರಪತಿ ಹೊಸ ಇ-ಪತ್ರಿಕೆ ಸ್ಥಾಪಿಸಿದ ಕಾರಣಗಳನ್ನು ವಿವರಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments