Webdunia - Bharat's app for daily news and videos

Install App

ಅನೈತಿಕ ಸಂಬಂಧ: ಪತಿ, ಕೆಲಸದಾಳಿನ ನೆರವಿನಿಂದ ಪ್ರಿಯಕರನ ಹತ್ಯೆ ಮಾಡಿದ ಮಹಿಳೆ

Webdunia
ಮಂಗಳವಾರ, 1 ಏಪ್ರಿಲ್ 2014 (11:44 IST)
ಪತಿ ಮತ್ತು ಕೆಲಸದಾಳಿನ ನೆರವಿನಿಂದ ಪ್ರಿಯತಮನನ್ನು ಹತ್ಯೆ ಮಾಡಿದ 33 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಪೊಲೀಸರಿಗೆ ಶರಣಾದ ದಾರುಣ ಘಟನೆ ವರದಿಯಾಗಿದೆ.

18 ತಿಂಗಳ ಹಸುಗೂಸಿನ ತಾಯಿಯಾದ ಅಮನ್‌ದೀಪ್ ಕೌರ್ ತನ್ನ ಪತಿ ರಾಜ್‌ಲಿಂದರ್ ಸಿಂಗ್ ಮತ್ತು ಕೆಲಸದಾಳು ದರ್ಶನ್ ನೆರವಿನಿಂದ ಜನೆವರಿ 2 ರಂದು ಪ್ರಿಯಕರನ್ನು ಹತ್ಯೆ ಮಾಡಿದ್ದಳು.

ಕಳೆದ ಒಂಬತ್ತು ವರ್ಷಗಳಿಂದ ಪ್ರಿಯತಮನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅಮನ್‌ದೀಪ್‌ ಕೌರ್‌ಗೆ ಆತನನ್ನು ತೊರೆದು ಪತಿಯೊಂದಿಗೆ ನೆಮ್ಮದಿಯಿಂದ ಬಾಳಬೇಕು ಎಂದು ತೀರ್ಮಾನಿಸಿದ್ದಳು. ಆದರೆ, ಪ್ರಿಯತಮ ಮಾತ್ರ ನಾನು ನಿನ್ನ ಬಿಟ್ಟು ಬಾಳಲು ಸಾಧ್ಯವಿಲ್ಲ ಎಂದು ಖಂಡ ತುಂಡವಾಗಿ ಹೇಳಿದ್ದಾನೆ. ಪ್ರತಿನಿತ್ಯ ಮನೆಯ ಹತ್ತಿರ ಬಂದು ಕಿರುಕುಳ ನೀಡಿದಾಗ ಅಮನ್‌ದೀಪ್ ಕೌರ್ ಆತನನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ.

ಅಮನ್‌ದೀಪ್ ತನ್ನ ಪ್ರಿಯಕರನನ್ನು ಉಪಾಯವಾಗಿ ಮನೆಗೆ ಕರೆಸಿಕೊಂಡು ಊಟದಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ ನೀಡಿದ್ದಾಳೆ. ಊಟವನ್ನು ಸೇವಿಸಿದ ಪ್ರಿಯಕರ ತನ್ನ ಪ್ರಜ್ಞೆಯನ್ನು ಕಳೆದುಕೊಂಡಿದ್ದಾನೆ. ನಂತರ ಆತನನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ ಬಂದ್ ಮಾಡಿದ್ದಾರೆ.ಉಸಿರುಗಟ್ಟಿ ಪ್ರಿಯತಮ ಕೊನೆಯುಸಿರೆಳೆದಿದ್ದಾನೆ.

ನಾನು ಇಷ್ಟಪಟ್ಟು ಪತಿಯೊಂದಿಗೆ ವಿವಾಹವಾಗಿ ನೆಮ್ಮದಿಯಿಂದ ಬದುಕಬೇಕು ಎಂದು ನಿರ್ಧರಿಸಿದ್ದೆ. ಆದರೆ, ಪ್ರಿಯಕರ ಹರ್‌ಪ್ರೀತ್ ಅದಕ್ಕೆ ಅಡ್ಡಿಯಾಗಿದ್ದ. ಆತನ ಕಿರುಕುಳಕ್ಕೆ ಕೊನೆಹಾಡಬೇಕು ಎಂದು ನಿರ್ಧರಿಸಿ ಹತ್ಯೆ ಮಾಡಿದೆ ಎಂದು ಮಹಿಳೆ ಅಮನ್‌ದೀಪ್ ಕೌರ್ ಪೊಲೀಸರಿಗೆ ತಿಳಿಸಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments