Webdunia - Bharat's app for daily news and videos

Install App

ಅತ್ಯಾಚಾರ ಸಂತ್ರಸ್ತೆಯ ಚಿತ್ರ ಬಿಡುಗಡೆ ಮಾಡಿದ ಮಾಹಿತಿ ಇಲಾಖೆ

Webdunia
ಸೋಮವಾರ, 29 ಜುಲೈ 2013 (19:49 IST)
PTI
PTI
ರಾಜಕೋಟ್: ಗುಜರಾತ್ ಸರ್ಕಾರದ ಮಾಹಿತಿ ಇಲಾಖೆ ಭಾನುವಾರ ಅತ್ಯಾಚಾರಕ್ಕೆ ಬಲಿಪಶುವಾದ ಅಪ್ರಾಪ್ತ ವಯಸ್ಕ ಬಾಲಕಿಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅತ್ಯಾಚಾರ ಪ್ರಕರಣಗಳನ್ನು ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳು ಸಂವೇದನಾರಹಿತ ರೀತಿಯಲ್ಲಿ ನಿಭಾಯಿಸುತ್ತಿರುವ ರೀತಿಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಸುಪ್ರೀಂಕೋರ್ಟ್ ಮಾರ್ಗದರ್ಶಕಗಳ ನಡುವೆಯೂ, ಈ ಚಿತ್ರಗಳು ಬಿಡುಗಡೆಯಾಗಿರುವುದು ವಿಪರ್ಯಾಸವಾಗಿದೆ.

ಶುಕ್ರವಾರ ನಿರ್ದಯವಾಗಿ ಅತ್ಯಾಚಾರಕ್ಕೊಳಗಾದ ಏಳು ವರ್ಷದ ಬಾಲಕಿಯನ್ನು ಭೇಟಿ ಮಾಡಲು ಗುಜರಾತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವಸುಬೇನ್ ತ್ರಿವೇದಿ ತೆರಳಿದ್ದ ಸಂದರ್ಭದಲ್ಲಿ ಈ ಚಿತ್ರಗಳನ್ನು ತೆಗೆಯಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್(ಎ) ಅನ್ವಯ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದು ಕೂಡ ಶಿಕ್ಷಾರ್ಹ ಅಪರಾಧ. ಮಾಹಿತಿ ಇಲಾಖೆ ಬಿಡುಗಡೆ ಮಾಡಿದ ಐದು ಚಿತ್ರಗಳ ಪೈಕಿ ನಾಲ್ಕು ಚಿತ್ರಗಳಲ್ಲಿ ಬಾಲಕಿಯ ಚಿತ್ರವನ್ನು ತೋರಿಸಿರುವುದು ಆಘಾತಕಾರಿಯಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments