Select Your Language

Notifications

webdunia
webdunia
webdunia
webdunia

ಅತ್ಯಾಚಾರಕ್ಕೊಳಗಾದ ಯುವತಿಯಿಂದ ಐಎಎಸ್ ಅಧಿಕಾರಿ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯ.

ಅತ್ಯಾಚಾರಕ್ಕೊಳಗಾದ ಯುವತಿಯಿಂದ ಐಎಎಸ್ ಅಧಿಕಾರಿ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯ.
ಜೈಪುರ್ , ಮಂಗಳವಾರ, 1 ಏಪ್ರಿಲ್ 2014 (12:31 IST)
ತನ್ನ ಮೇಲೆ ನಡೆದ ಅತ್ಯಾಚಾರದ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತ ಪಡಿಸಿರುವ 23 ವರ್ಷದ ಬಾಧಿತ ಯುವತಿ ದೂರು ದಾಖಲಾದ ದಿನದಿಂದ ನಾಪತ್ತೆಯಾಗಿರುವ ಐಎಎಸ್ ಅಧಿಕಾರಿ ಬಿ ಬಿ ಮೂರ್ತಿ ಯನ್ನು ಬಂಧಿಸುವಂತೆ ಮತ್ತು ಪ್ರಕರಣದಲ್ಲಿ ಸಿಬಿಐ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಿಂಕ ಪ್ರೆಸ್ ಕ್ಲಬ್ ಲ್ಲಿ ಪತ್ರಿಕಾಗೋಷ್ಠಿ ಕರೆದ ಯುವತಿ, ಪೋಲಿಸರು ಇನ್ನೂ ಆರೋಪಿಯನ್ನು ಬಂಧಿಸಿಲ್ಲ ಮತ್ತು ಆತನ ಮನೆಯನ್ನು ಕೂಡ ಹುಡುಕಿಲ್ಲ. ಪೋಲಿಸರ ನಿಧಾನಗತಿಯ ತನಿಖೆ ವಿರುದ್ಧ ರಾಜಸ್ಥಾನ ಸರಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ , ಹೀಗಾಗಿ ಈ ವಿಷಯದಲ್ಲಿ ಸಿಬಿಐ ಮಧ್ಯ ಪ್ರವೇಶಿಸಬೇಕು. ತಾನು ಒಂದು ದಿನದೊಳಗೆ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾರವರನ್ನು ಭೇಟಿಯಾಗಿ ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾಳೆ.

ತಾನು ಈಗಾಗಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಲತಾಕುಮಾರಿಯವರನ್ನು ಭೇಟಿಯಾಗಿ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ನೊಂದ ಯುವತಿ ಹೇಳಿದ್ದಾಳೆ.

ಈ ಕುರಿತು ಡಿಸಿಪಿ( ದಕ್ಷಿಣ) ಸಂಜಯ್ ಸ್ರೋತ್ರಿಯಾ ಅವರನ್ನು ಸಂಪರ್ಕಿಸಿದಾಗ ನಾಳೆ ಮಹೇಶ ನಗರದಲ್ಲಿರುವ ಮೊಹಾಂತಿ ಯವರ ಮನೆಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನ ನಾಗರೀಕ ಸೇವಾ ಸಮಿತಿಯ ಅಧ್ಯಕ್ಷರಾದ ಮೊಹಾಂತಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಮಾಡಲು ಸಹಾಯ ಮಾಡುವ ಆಮಿಷ ಒಡ್ಡಿ ಪದೇ ಪದೇ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಾಧಿತ ಯುವತಿ ಜನೆವರಿ 25 ರಂದು ನೀಡಿದ ದೂರಿನಲ್ಲಿ ಆಪಾದಿಸಿದ್ದಾಳೆ.

Share this Story:

Follow Webdunia kannada