Select Your Language

Notifications

webdunia
webdunia
webdunia
webdunia

ಅತಿ ಹೆಚ್ಚು ತೂಕದ ಹೆಣ್ಣುಮಗುವನ್ನು ಹೆತ್ತಳಾ ಮಹಾತಾಯಿ

ಅತಿ ಹೆಚ್ಚು ತೂಕದ ಹೆಣ್ಣುಮಗುವನ್ನು ಹೆತ್ತಳಾ ಮಹಾತಾಯಿ
, ಸೋಮವಾರ, 24 ಫೆಬ್ರವರಿ 2014 (12:12 IST)
PR
PR
ಇಂಫಾಲ: ಇಂಫಾಲದ ಜವಾಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಶೇನು ದೇವಿ 5.9 ಕೆಜಿಯ ಭಾರತದ ಅತೀ ತೂಕದ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಈ ಮೂಲಕ ಅತಿ ಹೆಚ್ಚಿನ ತೂಕದ ಮಗುವಿಗೆ ಜನ್ಮ ನೀಡಿ ಮಹಿಳೆ ದಾಖಲೆ ಮಾಡಿದ್ದಾರೆ. ಇದು ಅವರ ನಾಲ್ಕನೇ ಮಗುವಾಗಿದೆ. ಶುಕ್ರವಾರ ಸಂಜೆ 7.25ಕ್ಕೆ ಶೇನು ದೇವಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ತೆಗೆದರು.
ಇದಕ್ಕೆ ಮುಂಚೆ, 2010ರಲ್ಲಿ ಸೂರತ್‌ನಲ್ಲಿ 5.7 ಕೆಜಿ ತೂಕದ ಹೆಣ್ಣು ಮಗು ಜನಿಸಿತ್ತು. ಭಾರತದಲ್ಲಿ ನವಸಂಜಾತ ಶಿಶುವಿನ ಸಾಮಾನ್ಯ ತೂಕ 3 ಕೆಜಿ. ಗಿನ್ನಿಸ್ ದಾಖಲೆ ಪುಸ್ತಕಗಳ ಪ್ರಕಾರ, ಕೆನಡಾದಲ್ಲಿ 1879ರಲ್ಲಿ 12 ಪೌಂಡ್‌ನ ಅತಿ ಹೆಚ್ಚು ತೂಕದ ಮಗು ಜನಿಸಿತ್ತು.

ಆದರೆ ಆ ಮಗು ಹೆಚ್ಚು ಕಾಲ ಬದುಕುಳಿಯದೇ ಜನಿಸಿದ 11 ಗಂಟೆಗಳಲ್ಲಿ ಮೃತಪಟ್ಟಿತು. ಹೆಣ್ಣುಮಗುವಿನಲ್ಲಿ ಯಾವುದೇ ದೋಷವಿಲ್ಲ, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಅಸಾಮಾನ್ಯ ಗಾತ್ರದಿಂದಾಗಿ, ಅರಿವಳಿಕೆ ತಜ್ಞರು ಸೇರಿದ ತಂಡ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯನ್ನು ಎಚ್ಚರಿಕೆಯಿಂದ ನಿರ್ವಹಿಸಲಾಯಿತು.ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಆರೋಗ್ಯ ವಿಚಾರಿಸಲು ಬಂದಿದ್ದ ಜನರು ಭಾರತದ ಅತೀ ತೂಕದ ಮಗುವನ್ನು ಕಣ್ತುಂಬಿಕೊಂಡರು.

Share this Story:

Follow Webdunia kannada