Webdunia - Bharat's app for daily news and videos

Install App

ಅಡ್ವಾಣಿ ಪಕ್ಷದ ಖಾಯಂ ನೇತಾರ ಮತ್ತು ದಾರ್ಶನಿಕ: ಗಡ್ಕರಿ

Webdunia
ಗುರುವಾರ, 31 ಡಿಸೆಂಬರ್ 2009 (17:57 IST)
ಇತ್ತೀಚೆಗಷ್ಟೇ ಹೊಸದಾಗಿ ಸೃಷ್ಟಿಸಲಾದ ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷರಾಗಿರುವ ಎಲ್.ಕೆ. ಅಡ್ವಾಣಿಯವರು ಪಕ್ಷದ ಖಾಯಂ ಮಾರ್ಗದರ್ಶಕ ಮತ್ತು ದಾರ್ಶನಿಕರಾಗಿ ನಮಗೆ ಆದರ್ಶರಾಗಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದ್ದಾರೆ.
PTI


ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿಯವರು ನಮ್ಮ ಆದರ್ಶ ಪುರುಷರು ಮತ್ತು ಸ್ಫೂತಿಯ ಸೆಲೆಗಳು. ಅಡ್ವಾಣಿಯವರು ನಮ್ಮ ಪಕ್ಷದ ನೇತಾರ ಮತ್ತು ತತ್ವಜ್ಞಾನಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಇತ್ತೀಚೆಗಷ್ಟೇ ಅಧ್ಯಕ್ಷ ಪದವಿಯನ್ನಲಂಕರಿಸಿದ ಗಡ್ಕರಿ ಹೇಳಿದ್ದಾರೆ.

ಸಂಸದೀಯ ಪಕ್ಷದ ಅಧ್ಯಕ್ಷರೆಂಬ ಹೊಸ ಹುದ್ದೆ ಸೃಷ್ಟಿಸಿ ಅದಕ್ಕೆ ಅಡ್ವಾಣಿಯವರನ್ನು ನೇಮಿಸುವ ಮೂಲಕ ಸೀಮಿತಗೊಳಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಅಡ್ವಾಣಿಯವರ ಪ್ರಭಾವಿ ಸ್ಥಾನವನ್ನು ಸ್ಪಷ್ಟಪಡಿಸಿದರು.

ಮಹಾ ಚುನಾವಣೆಯಲ್ಲಿ ಕಳಪೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಶಕ್ತಿಗಳಿಂದಲೇ ಭಾರೀ ಟೀಕೆಗೊಳಗಾಗಿದ್ದ ಅಡ್ವಾಣಿಯವರು ಡಿಸೆಂಬರ್ 18ರಂದು ಲೋಕಸಭೆಯ ಪ್ರತಿಪಕ್ಷದ ನಾಯಕನ ಸ್ಥಾನವನ್ನು ತ್ಯಜಿಸಿದ್ದರು. ಬಳಿಕ ಅವರನ್ನು ಪಕ್ಷದ ಸಂಸದೀಯ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿ, ಪಕ್ಷದ ಸಂಸದೀಯ ವ್ಯವಹಾರಗಳ ನಿಯಂತ್ರಣವನ್ನು ಅಡ್ವಾಣಿ ಕೈಗೆ ನೀಡಲಾಗಿತ್ತು.

ಇತ್ತೀಚೆಗಷ್ಟೇ ರಾಷ್ಟ್ರೀಯ ವೇದಿಕೆಗೆ ಬಂದಿರುವ 52ರ ಗಡ್ಕರಿಗೆ ಈ ಬೆಳವಣಿಗೆ ಬಗ್ಗೆ ಕಿಂಚಿತ್ತೂ ಅಸಮಾಧಾನವಿಲ್ಲ. ಇದರಲ್ಲಿ ಯಾವುದೇ ಪೂರ್ವಗ್ರಹವನ್ನು ಹುಡುಕದ ಅವರು, ಅದನ್ನು ಆಸ್ತಿಯೆಂದೇ ಪರಿಗಣಿಸಿದ್ದಾರೆ.

ಪಕ್ಷವು ತೀರಾ ಕುಸಿದಿದ್ದ ಸಂದರ್ಭದಲ್ಲಿ ಡಿಸೆಂಬರ್ 18ರಂದು ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದ ಗಡ್ಕರಿ, ಬಿಜೆಪಿಯಲ್ಲಿನ ಸಮಸ್ಯೆಗಳಿಗೆ ಕೆಲವು ಪರಿಹಾರಗಳು ಅಗತ್ಯವಿರುವುದನ್ನು ಮನಗಂಡಿದ್ದಾರೆ. ಅದಕ್ಕಾಗಿ ಮುಂದಿನ ಮೂರು ತಿಂಗಳುಗಳೊಳಗೆ ಅಗತ್ಯ ಬದಲಾವಣೆಗಳ ಪಟ್ಟಿಯನ್ನು ಸಿದ್ಧಗೊಳಿಸುವುದಾಗಿ ಅವರು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments