Webdunia - Bharat's app for daily news and videos

Install App

ದರೋಡೆ ಮತ್ತು ಅಶ್ಲೀಲ ವಿಡಿಯೋ ಚಿತ್ರೀಕರಣ: ರಾಷ್ಟೀಯ ಚಾಂಪಿಯನ್ ಸೇರಿ, ಮೂವರ ಬಂಧನ.

Webdunia
ಮಂಗಳವಾರ, 1 ಏಪ್ರಿಲ್ 2014 (12:32 IST)
ವೈದ್ಯರೊಬ್ಬರನ್ನು ದರೋಡೆ ಮತ್ತು ಸುಲಿಗೆ ನಡೆಸಿದ್ದಕ್ಕಾಗಿ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ರವಿವಾರ ದಕ್ಷಿಣ ದೆಹಲಿಯಲ್ಲಿ, ರಾಷ್ಟೀಯ ಶೂಟಿಂಗ್ ಚಾಂಪಿಯನ್ ಸಂದೀಪ್ ಸಿಂಗ್ ಬುಂದ್ರಲ್ ಮತ್ತು ಅವರ ಸಹಚರರಿಬ್ಬರನ್ನು ಬಂಧಿಸಿದ್ದಾರೆ.

ಸಂದೀಪ್ ಸಿಂಗ್ ಬುಂದ್ರಲ್ (22), ರಾಹುಲ್ (26) ಮತ್ತು ಸಿದ್ಧಾರ್ಥ್ (28) ಎಂಬ ಮೂವರು ಯುವಕರು, ಡಾಕ್ಟರ್ ರಂಜಿತ್ ವರ್ಮಾ ಎಂಬುವವರನ್ನು ತಮ್ಮ ನಿವಾಸ ಮಸೀದಿ ಮೊತ್ ಗೆ ವೈದ್ಯಕೀಯ ಕಾರಣ ನೀಡಿ ಕರೆಸಿಕೊಂಡಿದ್ದರು.

ವೈದ್ಯರು ಆಗಮಿಸಿದ ಕೂಡಲೇ ಮೂವರು ಅವರನ್ನು ಥಳಿಸಿ ,ಕಾಮಪ್ರಚೋದಕ ವಿಡಿಯೋ ಚಿತ್ರೀಕರಿಸಲು ಅವರನ್ನು ನಗ್ನರನ್ನಾಗಿಸಿದ್ದಾರೆ.

ಒಂದು ಗಂಟೆಗಳ ಕಾಲ ವೈದ್ಯರನ್ನು ಕೋಣೆಯಲ್ಲಿ ಕೂಡಿ ಹಾಕಲಾಗಿದ್ದು. ಡಿಗ್ನಿ ರಸ್ತೆಯ ಮೂಲಕ ಅವರನ್ನು ಬೇರೆ ಕಡೆ ಸ್ಥಳಾಂತರಿಸುವಾಗ ವರ್ಮಾ ಕಿರುಚಿಕೊಂಡಿದ್ದಾರೆ. ಬೆದರಿದ ಆರೋಪಿಗಳು ಪಲಾಯನ ಮಾಡಿದ್ದಾರೆ. ತಕ್ಷಣ ಹೌಜ್ ಖಾಸ್ ಪೊಲೀಸ್ ಠಾಣೆಗೆ ತೆರಳಿದ ವರ್ಮಾ ದೂರು ದಾಖಲಿಸಿದ್ದಾರೆ.

" ಆರೋಪಿಗಳು ಕದ್ದಿದ್ದ 2 ಎರಡು ಮೊಬೈಲ್, ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಿ ಅಪಹರಿಸಲಾಗಿದ್ದ 16, 000 ರೂಪಾಯಿ, ಕೆಲವು ದಾಖಲೆಗಳು ಮತ್ತು ಎಟಿಎಂ ಕಾರ್ಡ್ ನ್ನು ನಾವು ವಶಪಡಿಸಿಕೊಂಡಿದ್ದೇವೆ. ವೈದ್ಯರ ಕಾಮಪ್ರಚೋದಕ ವಿಡಿಯೋ ಚಿತ್ರೀಕರಿಸಲು ಬಳಸಿಕೊಂಡ ಲ್ಯಾಪ್ ಟಾಪ್ ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ" ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ಕಳೆದ ಜನೇವರಿ 28 ರಂದು ನಡೆದಿದ್ದು, ಆರೋಪಿಗಳು ನಾಪತ್ತೆಯಾಗಿದ್ದರು. ಬಿಗಿ ಕಾರ್ಯಾಚರಣೆ ನಡೆಸಿದ ಪೊಲೀಸ್ ರು ಭಾನುವಾರ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೆಹಲಿಯ ಪೊಲೀಸ್ ರ ಪತ್ರಿಕಾ ಹೇಳಿಕೆಯ ಪ್ರಕಾರ, ಆಪಾದಿತ ಬುಂದ್ರಲ್ , 10 ಮೀ ಪಿಸ್ತೂಲ್ ಶೂಂಟಿಂಗ್ ನಲ್ಲಿ ರಾಷ್ಟೀಯ ಚಾಂಪಿಯನ್ ಮತ್ತು 2010-11 ನಲ್ಲಿ ಸಿಂಗಾಪುರದಲ್ಲಿ ನಡೆದ ಶೂಂಟಿಂಗ್ ಚಾಂಪಿಯನ್ಸಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲದೆ 2010 ರಲ್ಲಿ ಜಮ್ಮು& ಕಾಶ್ಮೀರ್ ಪೊಲೀಸ್ ನಲ್ಲಿ 10 ತಿಂಗಳು ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments