Select Your Language

Notifications

webdunia
webdunia
webdunia
webdunia

ದಾವೂದ್ ಸೋದರ ಅನೀಸ್ ಮೇಲೆ ಗುಂಡಿನ ದಾಳಿ?

ದಾವೂದ್ ಸೋದರ ಅನೀಸ್ ಮೇಲೆ ಗುಂಡಿನ ದಾಳಿ?
ಮುಂಬೈ , ಶುಕ್ರವಾರ, 5 ಜೂನ್ 2009 (12:59 IST)
ಮುಂಬೈ: ಮುಂಬೈ ಪಾತಕ ಲೋಕದ ದೊರೆ, ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನ ಕುಖ್ಯಾತ ಸಹೋದರ ಅನೀಸ್ ಇಬ್ರಾಹಿಂ ಮೇಲೆ ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಕರಾಚಿಯ ಅಲ್-ಹಬೀಬ್ ಬ್ಯಾಂಕ್ ಎಟಿಎಂ ಬಳಿ ಅನೀಸ್ ಮೇಲೆ ಗುಂಡು ಹಾರಿಸಲಾಗಿದೆ. ಗುರುವಾರ ರಾತ್ರಿ ಎಟಿಎಂನಿಂದ ಹೊರಬಂದು ತನ್ನ ಕಾರಿನತ್ತ ಹೋಗುತ್ತಿದ್ದ ಅನೀಸ್ ಮೇಲೆ ಕನಿಷ್ಠ ಒಂದು ಡಜನ್ ಬುಲೆಟ್‌ಗಳನ್ನು ಸಿಡಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಅಧಿಕೃತ ವರದಿಗಾಗಿ ಕಾಯಲಾಗುತ್ತಿದೆ.

ಬಲೂಚ್ ಮೂಲದ ವ್ಯಕ್ತಿಗಳು ಅನೀಸ್ ಮೇಲೆ ಗುಂಡಿನ ದಾಳಿ ನಡೆಸಿದರೆಂದು ಹೇಳಲಾಗುತ್ತಿದೆ. ಅನೀಸ್ ಸ್ಥಿತಿ ಬಗ್ಗೆ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.

Share this Story:

Follow Webdunia kannada