Select Your Language

Notifications

webdunia
webdunia
webdunia
webdunia

ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು

ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು
ತೋಡುಪುಳ (ಕೇರಳ) , ಗುರುವಾರ, 30 ಮೇ 2013 (15:20 IST)
PTI
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೇರಳದ ಸೂರ್ಯನೆಲ್ಲಿ ಬಾಲಕಿ ಮೆಲೆ ಸತತ 45 ದಿನಗಳ ಕಾಲ ಅತ್ಯಾಚಾರವೆಸಗಿದ 42 ಮಂದಿಯಲ್ಲಿ ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್‌ ಕೂಡ ಒಬ್ಬರಾಗಿದ್ದರು, ಇದಕ್ಕೆ ನಾನೇ ಸಾಕ್ಷಿ ಎಂಬರ್ಥದಲ್ಲಿ ಫೆಬ್ರವರಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದ, ಕರ್ನಾಟಕದ ಸಾಗರದಲ್ಲಿ ಸೆರೆಸಿಕ್ಕ ಪ್ರಕರಣದ ಏಕೈಕ ದೋಷಿ ಧರ್ಮರಾಜನ್‌ ಇದೀಗ ಉಲ್ಟಾ ಹೊಡೆದಿದ್ದಾನೆ. ಕುರಿಯನ್‌ ಅವರು ನನಗೆ ಗೊತ್ತಿಲ್ಲ. ಅವರ ಫೋಟೋವನ್ನು ಮಾಧ್ಯಮಗಳಲ್ಲಷ್ಟೇ ನೋಡಿದ್ದೇನೆ ಎಂದು ಹೇಳಿದ್ದಾನೆ. ಇದರಿಂದಾಗಿ ದೇಶಾದ್ಯಂತ ಸುದ್ದಿ ಮಾಡಿದ್ದ ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕುರಿಯನ್‌ ನಿರಾಳರಾಗಿದ್ದಾರೆ.

ಇಡುಕ್ಕಿ ಜಿಲ್ಲೆಯ ತೋಡುಪುಳ ಸೆಷನ್ಸ್‌ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ಧರ್ಮರಾಜನ್‌, ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದಾಗ ಕೇರಳ ಟೀವಿ ವಾಹಿನಿಯೊಂದರ ವರದಿಗಾರನೊಬ್ಬ ಪ್ರಶ್ನೆಗಳ ಸುರಿಮಳೆಗರೆದಿದ್ದರಿಂದಾಗಿ ಗೊಂದಲಕ್ಕೊಳಗಾಗಿ ನಾನು ಕುರಿಯನ್‌ ವಿರುದ್ಧ ಆರೋಪಗಳನ್ನು ಮಾಡಿದ್ದೆ. ಕುರಿಯನ್‌ ಅವರು ನನಗೆ ಗೊತ್ತಿಲ್ಲ. ಮಾಧ್ಯಮಗಳ ಮೂಲಕವಷ್ಟೇ ನೋಡಿದ್ದೇನೆ ಎಂದು ತಿಳಿಸಿದ್ದಾನೆ.

ಸೂರ್ಯನೆಲ್ಲಿ ಅತ್ಯಾಚಾರ ಸಂತ್ರಸ್ತೆ ತಂಗಿದ್ದ ಕುಮಾಲಿಯ ಅತಿಥಿ ಗೃಹಕ್ಕೆ ನನ್ನ ಕಾರಿನಲ್ಲೇ ಕುರಿಯನ್‌ ಅವರನ್ನು ಕರೆದೊಯ್ದಿದ್ದೆ. ಸಂತ್ರಸ್ತೆ ಮೇಲೆ ದೌರ್ಜನ್ಯ ನಡೆವಾಗ ನಾನೂ ಸ್ಥಳದಲ್ಲಿದ್ದೆ. ತನಿಖಾಧಿಕಾರಿಗಳ ಒತ್ತಡದಿಂದ ಆ ಸಂದರ್ಭ ಕುರಿಯನ್‌ ಹೆಸರು ಹೇಳಿರಲಿಲ್ಲ ಎಂದು ಧರ್ಮರಾಜನ್‌ ಫೆಬ್ರವರಿಯಲ್ಲಿ ಹೇಳಿದ್ದ. ಆದರೆ ಇದೀಗ ತನ್ನ ಬಳಿ ಸ್ವಂತ ಕಾರೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾನೆ.

ಧರ್ಮರಾಜನ್‌ ಹೇಳಿಕೆ ಆಧರಿಸಿ ಕುರಿಯನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂರ್ಯನೆಲ್ಲಿ ಸಂತ್ರಸ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ತಿಳಿಸುವಂತೆ ಧರ್ಮರಾಜನ್‌ಗೆ ನ್ಯಾಯಾಲಯ ಸೂಚಿಸಿತ್ತು.

Share this Story:

Follow Webdunia kannada