Webdunia - Bharat's app for daily news and videos

Install App

ವಿಚಿತ್ರ ತೀರ್ಪು : ಗ್ಯಾಂಗ್‌ರೇಪ್ ಎಸಗಿದ ಆರೋಪಿಗಳಿಗೆ 10 ಸಾವಿರ ದಂಡ ವಿಧಿಸಿದ ಪಂಚಾಯಿತಿ

Webdunia
ಸೋಮವಾರ, 31 ಮಾರ್ಚ್ 2014 (19:51 IST)
ಕಾನೂನನ್ನು ತಮಾಷೆಯಾಗಿಸುವಂತಹ ತೀರ್ಪನ್ನು ಬಿಹಾರ್ ಮುಜಾಫರ್‌ಪುರ್ ಜಿಲ್ಲೆಯ ರಾಜವಾಡಾ ಗ್ರಾಮದ ಪಂಚಾಯತಿಯೊಂದು ತೀರ್ಪು ನೀಡಿದೆ.

10 ಜನರ ಗುಂಪೊಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿತ್ತು. ಅತ್ಯಾಚಾರವೆಗಿದ ಆರೋಪಿಗಳು ಪರಿಹಾರವಾಗಿ ಬಾಲಕಿಗೆ 10 ಸಾವಿರ ರೂಪಾಯಿ ನೀಡಬೇಕು. ಬಾಲಕಿಯ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಬಾರದು ಎಂದು ಪಂಚಾಯಿತಿ ತೀರ್ಪು ನೀಡಿ ಕೋಲಾಹಲ ಸೃಷ್ಟಿಸಿದೆ.

ಆದರೆ, ಬಾಲಕಿಯ ತಾಯಿ ಮುಷಾಹರಿ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಆರೋಪಿಗಳಾದ ಭೂಷಣ್ ಠಾಕೂರ್ ಮತ್ತು ಮಹಾವೀರ್ ಮಹತೋ ಸೇರಿದಂತೆ 10 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಧನಂಜಯ್ ಕುಮಾರ್ ತಿಳಿಸಿದ್ದಾರೆ.

ಆರೋಪಿಗಳು ಮಗಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಹತ್ಯೆಗೈಯುವ ಬೆದರಿಕೆಯೊಡ್ಡುತ್ತಿದ್ದಾರೆ. ಅತ್ಯಾಚಾರವೆಸಗಿದ ವ್ಯಕ್ತಿಗಳು ತುಂಬಾ ಪ್ರಬಲವಾಗಿರುವುದರಿಂದ ತನಿಖೆಗೆ ಅಡ್ಡಿಯಾಗಲಿದೆ ಎಂದು ಬಾಲಕಿಯ ತಾಯಿ ಆತಂಕ ವ್ಯಕ್ತಪಡಿಸಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments