Select Your Language

Notifications

webdunia
webdunia
webdunia
webdunia

ಲಾಲೂ ಪ್ರಸಾದ್‌ಗೆ ಶಿಕ್ಷೆ: ರಾಜಕೀಯ ಭವಿಷ್ಯ ನುಚ್ಚುನೂರು

ಲಾಲೂ ಪ್ರಸಾದ್‌ಗೆ ಶಿಕ್ಷೆ: ರಾಜಕೀಯ ಭವಿಷ್ಯ ನುಚ್ಚುನೂರು
, ಸೋಮವಾರ, 30 ಸೆಪ್ಟಂಬರ್ 2013 (15:06 IST)
PR
PR
ನವದೆಹಲಿ: ಸಿಬಿಐನ ವಿಶೇಷ ಕೋರ್ಟ್ ಲಾಲೂ ಪ್ರಸಾದ್ ಯಾದವ್ ಮತ್ತು ಇನ್ನೂ 44 ಜನರನ್ನು ಮೇವು ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನಾಗಿ ಮಾಡಿದೆ. ಜಾನುವಾರುಗಳ ಮೇವು ಖರೀದಿಗೆ ಸರ್ಕಾರಿ ಖಜಾನೆಯಿಂದ 37 ಕೋಟಿ ರೂ. ಪೆಡದು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಈ ಹಗರಣ ಸಂಬಂಧಿಸಿದೆ. ಈ ತೀರ್ಪು ಲಾಲೂ ಪ್ರಸಾದ್ ಅವರಿಗೆ ದೊಡ್ಡ ಪೆಟ್ಟು ನೀಡಿದ್ದು, ಅವರ ರಾಜಕೀಯ ಭವಿಷ್ಯಕ್ಕೆ ಅಂತಿಮತೆರೆ ಬೀಳುವ ಸಾಧ್ಯತೆಯಿದೆ. ಮುಂದಿನ ಚುನಾವಣೆಯಲ್ಲಿ ಆರ್‌ಜೆಡಿ ಗೆದ್ದುಬರುವ ಸಾಧ್ಯತೆ ನುಚ್ಚುನೂರಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಸುಪ್ರೀಂಕೋರ್ಟ್ ಜುಲೈನಲ್ಲಿ ನೀಡಿದ ತೀರ್ಪಿಗೆ ಎರಡನೇ ಬಲಿಪಶುವಾಗಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಕೋರ್ಟ್ ಶಿಕ್ಷೆ ನೀಡುವ ಸಂಸತ್ ಸದಸ್ಯರು ಮತ್ತು ರಾಜ್ಯ ಶಾಸಕರು ತಕ್ಷಣವೇ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಮುಂಚೆ ರಾಜ್ಯಸಭೆ ಸದಸ್ಯ ರಷೀದ್ ಮಸೂದ್ ಅವರು ವೈದ್ಯಕೀಯ ಕಾಲೇಜು ಸೀಟುಗಳಿಗೆ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆಮಾಡಿದ್ದರಿಂದ ವಿಶೇಷ ಸಿಬಿಐ ಕೋರ್ಟ್ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿದೆ. ಲಾಲೂ ಪ್ರಸಾದ್ ಅವರ ಹಿನ್ನಡೆಯಿಂದ ಬಿಹಾರದಲ್ಲಿ ರಾಜಕೀಯ ಪುನರ್‌ಹೊಂದಾಣಿಕೆ ಸಂಭವವಿದ್ದು, ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಪುನಶ್ಚೇತನಕ್ಕೆ ಅವಕಾಶದ ಬಾಗಿಲು ತೆರೆಯಲಿದೆ.

webdunia
PR
PR
ರಾಜ್ಯದ ರಾಜಕೀಯ ಚಿತ್ರಣದಲ್ಲಿ ಪ್ರಸ್ತುತ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಬಿಜೆಪಿ ಪ್ರಾಬಲ್ಯ ಸಾಧಿಸಿವೆ. ಎರಡೂ ಮಿತ್ರಪಕ್ಷಗಳಾಗಿದ್ದಾಗ ರಾಜಕೀಯ ವಿರೋಧ ಇರಲಿಲ್ಲ. ಆದರೆ ಎರಡೂ ಮೈತ್ರಿ ಮುರಿದುಕೊಂಡ ಬಳಿಕ ಆರ್‌‌ಜೆಡಿಯಲ್ಲಿ ಆಶಾಭಾವನೆ ಮಿನುಗಿತ್ತು. ಆದರೆ ಈಗ ಲಾಲೂ ತಪ್ಪಿತಸ್ಥರಾಗಿರುವುದರಿಂದ ಆರ್‌ಜೆಡಿ ಭವಿಷ್ಯ ಮಂಕಾಗಿದೆ. ಈಗ ಬಿಜೆಪಿ ಮತ್ತು ಜೆಡಿಯು ನಡುವೆ ಮುಖಾಮುಖಿ ಹಣಾಹಣಿ ನಡೆಯಲಿದೆ. ಆದರೆ ಲಾಲೂ ಜಾಗದಿಂದ ತೆರವಾದ ಸ್ಥಾನವನ್ನು ಕಾಂಗ್ರೆಸ್ ತುಂಬುತ್ತದೆಯೇ ಎಂದು ಈಗ ಕಾದುನೋಡಬೇಕಾಗಿದೆ.

ಲಾಲೂ ಪ್ರಸಾದ್ ಯಾದವ್ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರ ಹುದ್ದೆಯನ್ನು ನಿರ್ವಹಿಸಿ ಅದನ್ನು ಲಾಭದಾಯಕ ಸಂಸ್ಥೆಯಾಗಿ ಮಾಡಿದ್ದಾರೆಂದು ಪ್ರಚಾರ ಪಡೆದಿತ್ತು. ಅವರು ರೈಲ್ವೆ ಸಚಿವರಾಗಿದ್ದಾಗ ಮನೆ, ಮನೆ ಮಾತಾಗಿದ್ದರು. ಆದರೆ ಅವರಿಗೆ ಸಿಬಿಐ ಕೋರ್ಟ್ ನೀಡಿದ ಶಿಕ್ಷೆ ಅವರ ರಾಜಕೀಯ ಭವಿಷ್ಯವನ್ನು ಅಲ್ಲೋಲಕಲ್ಲೋಲಗೊಳಿಸಿದೆ.

Share this Story:

Follow Webdunia kannada