" ಮೋದಿ ಒಬ್ಬ ನಿರಂಕುಶವಾದಿ. ಹಾಗಾಗಿ ಅವರು ಹಿಂದೂಸ್ತಾನದಂತಹ ಪ್ರಜಾಸತ್ತಾತ್ಮಕ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ಬಿಜೆಪಿ ಏನು ಬೇಕಾದರೂ ಮಾಡಲಿ. ಮಾಧ್ಯಮಗಳನ್ನು ಖರೀದಿಸಲಿ, ಆದರೆ ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
" ಮೋದಿ ಬಿಜೆಪಿಯ ಕೇಂದ್ರದಲ್ಲಿ ಬಂದ ಮೇಲೆ ಪಕ್ಷದ ಹಲವಾರು ಸಂಸ್ಥಾಪಕ ಸದಸ್ಯರನ್ನು ಕಡೆಗಣಿಸಲಾಯಿತು" ಎಂದು ವರ್ಮಾ ಆರೋಪಿಸಿದ್ದಾರೆ.
" ವಾರಣಾಸಿಯಲ್ಲಿ ಮೋದಿ ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ, ಸದ್ಯದಲ್ಲೇ ಆ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ.