Webdunia - Bharat's app for daily news and videos

Install App

ಮೋದಿ ಗಡ್ಡ ಮೀಸೆ ಬೋಳಿಸಿದಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರೆ: ನುಲಿದ ಚಿತ್ರಾಂಗದಾ

Webdunia
ಬುಧವಾರ, 18 ಡಿಸೆಂಬರ್ 2013 (17:20 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗಡ್ಡ ಮೀಸೆ ಬೋಳಿಸಿಕೊಂಡಲ್ಲಿ ಸುಂದರವಾಗಿ ಕಾಣುತ್ತಾರೆ ಎಂದು ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ನುಲಿದಿದ್ದಾರೆ.

ಪ್ರತಿಯೊಬ್ಬ ಪುರುಷರು ಗಡ್ಡ ಮೀಸೆ ಬೋಳಿಸಿಕೊಂಡಲ್ಲಿ ಸುಂದರವಾಗಿ ಕಾಣುತ್ತಾರೆ. ಅದರಂತೆ, ಮೋದಿ ಕೂಡಾ ಒಂದು ಬಾರಿ ಗಡ್ಡ ಮೀಸೆ ಬೋಳಿಸಿ ಪ್ರಯತ್ನಿಸಬಹುದು ಎಂದು ಗಿಲ್ಲೆಟ್ಟ್ ಬ್ಲೇಡ್ ಆಯೋಜಿಸಿದ ಅನ್‌ಶೇವನ್ ಇಸ್ ಅನ್‌ಬಾತ್ಡ್‌ ಚಳುವಳಿಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗಡ್ಡ, ಮೀಸೆಯನ್ನು ಹೊಂದಿದ್ದರಿಂದ ಆಕರ್ಷಕವಾಗಿ ಕಾಣಿಸುವುದಿಲ್ಲವೇ?ಎನ್ನುವ ಪ್ರಶ್ನೆಗೆ ಉತ್ತರಿಸಿದ ಚಿತ್ರಾಂಗದಾ, ಸಿಖ್‌ರಿಗೆ ಧಾರ್ಮಿಕ ಕಟ್ಟಪ್ಪಣೆಯಿರುವುದರಿಂದ ಅವರು ಗಡ್ಡ, ಮೀಸೆಯನ್ನು ಬಿಡಬಹುದು. ಆದರೂ ಚೆನ್ನಾಗಿ ಕಾಣುತ್ತಾರೆ ಎಂದು ತಮ್ಮ ನಿಲುವು ಕೂಡಲೇ ಬದಲಿಸಿದ್ದಾರೆ.

ಏತನ್ಮದ್ಯೆ, ಪ್ರತಿನಿತ್ಯ ಗಡ್ಡ ಬೋಳಿಸಬೇಕಾದ ಪುರುಷರು ಗಡ್ಡವನ್ನು ಬೆಳೆಸುವುದು ಬಿಟ್ಟು ನೀಟಾಗಿ ಶೇವ್ ಮಾಡಿಕೊಳ್ಳಬೇಕು ಎನ್ನುವುದು ನನ್ನ ಸಲಹೆ ಎಂದು ಹೇಳಿದ್ದಾರೆ.

ಗಡ್ಡ ಬಿಟ್ಟ ನಿಮ್ಮ ಪ್ರೀತಿಯ ನಟ ಯಾರು ಎನ್ನುವ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಚಿತ್ರಾಂಗದಾ, ಸೂಪರ್ ಸ್ಟಾರ್ ರಜನಿಕಾಂತ್ ಗಡ್ಡದೊಂದಿಗೆ ತುಂಬಾ ಸುಂದರವಾಗಿ ಕಾಣುತ್ತಾರೆ. ಅವರು ಹೇಗಿದ್ದರೂ ಚೆನ್ನ ಎಂದು ವೈಯ್ಯಾರದಿಂದ ನುಲಿದಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments