Webdunia - Bharat's app for daily news and videos

Install App

ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ

Webdunia
ಮಂಗಳವಾರ, 25 ನವೆಂಬರ್ 2008 (20:24 IST)
ಎರಡು ವರ್ಷಗಳ ಹಿಂದೆ ಮುಂಬೈಯಲ್ಲಿ ಸಂಭವಿಸಿದ್ದ ಭೀಕರ ಸರಣಿ ಬಾಂಬ್ ಸ್ಫೋಟಗಳ ಪ್ರಮುಖ ರೂವಾರಿಗಳಲ್ಲಿ ಒಬ್ಬನಾದ ರಹೀಲ್ ಶೇಕ್‌ನನ್ನು ಮಂಗಳವಾರ ಬ್ರಿಟನ್‌ನ ಇಂಟರ್‌ಪೋಲ್ ಗುಪ್ತಚರದಳ ಸೆರೆ ಹಿಡಿದಿರುವುದಾಗಿ ಹೇಳಿದೆ.

2006 ರ ಜುಲೈ 11ರಂದು ಮುಂಬೈಯಲ್ಲಿ ಏಳು ಲೋಕಲ್ ರೈಲುಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸುವ ಮೂಲಕ ವಾಣಿಜ್ಯ ನಗರಿಯನ್ನು ತಲ್ಲಣಗೊಂಡಿತ್ತು. ಈ ಸ್ಫೋಟದಲ್ಲಿ 200ಮಂದಿ ಬಲಿಯಾಗಿದ್ದು, 700ಮಂದಿ ಗಾಯಗೊಂಡಿದ್ದರು.

ಇದೀಗ ಇಂಟರ್‌ಪೋಲ್‌ಗೆ ಸಿಕ್ಕಿಬಿದ್ದಿರುವ ರಹೀಲ್ ಶೇಕ್‌‌ ಮುಂಬೈ ಸ್ಫೋಟದ ಸಂಚಿಗೆ ಆರ್ಥಿಕ ನೆರವು ನೀಡಿದ್ದ ಎಂದು ಆರೋಪಿಸಲಾಗಿದೆ.

ರಹೀಲ್ ಬಗ್ಗೆ ಅಗತ್ಯವಿರುವ ಮಾಹಿತಿಗಳನ್ನೆಲ್ಲಾ ಇಂಟರ್‌ಪೋಲ್‌ಗೆ ಒದಗಿಸಿದ್ದು ಮುಂಬೈ ಭಯೋತ್ಪಾದನಾ ನಿಗ್ರಹ ದಳ. ಶೇಕ್ ಬಗ್ಗೆ ಮಾಹಿತಿ ಬಂದ ನಂತರ ಇಂಟರ್‌ಪೋಲ್ ಶೇಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.

ಶೇಕ್‌ಗೂ ಲಷ್ಕರ್ ತೊಯ್ಬಾ ಸಂಘಟನೆಗೂ ಸಂಬಂಧ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದು, ಪಾಕಿಸ್ತಾನ ಮೂಲದ ಈ ಸಂಘಟನೆಗೆ ಹೊಸದಾಗಿ ಸೇರುವ ಉಗ್ರಗಾಮಿಗಳಿಗೆ ತರಬೇತಿ ನೀಡುವವರಲ್ಲಿ ರಹೀಲ್ ಶೇಕ್ ಕೂಡ ಒಬ್ಬ ಎನ್ನಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments