Select Your Language

Notifications

webdunia
webdunia
webdunia
webdunia

ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ

ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ
ಲಂಡನ್ , ಮಂಗಳವಾರ, 25 ನವೆಂಬರ್ 2008 (20:24 IST)
ಎರಡು ವರ್ಷಗಳ ಹಿಂದೆ ಮುಂಬೈಯಲ್ಲಿ ಸಂಭವಿಸಿದ್ದ ಭೀಕರ ಸರಣಿ ಬಾಂಬ್ ಸ್ಫೋಟಗಳ ಪ್ರಮುಖ ರೂವಾರಿಗಳಲ್ಲಿ ಒಬ್ಬನಾದ ರಹೀಲ್ ಶೇಕ್‌ನನ್ನು ಮಂಗಳವಾರ ಬ್ರಿಟನ್‌ನ ಇಂಟರ್‌ಪೋಲ್ ಗುಪ್ತಚರದಳ ಸೆರೆ ಹಿಡಿದಿರುವುದಾಗಿ ಹೇಳಿದೆ.

2006ರ ಜುಲೈ 11ರಂದು ಮುಂಬೈಯಲ್ಲಿ ಏಳು ಲೋಕಲ್ ರೈಲುಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸುವ ಮೂಲಕ ವಾಣಿಜ್ಯ ನಗರಿಯನ್ನು ತಲ್ಲಣಗೊಂಡಿತ್ತು. ಈ ಸ್ಫೋಟದಲ್ಲಿ 200ಮಂದಿ ಬಲಿಯಾಗಿದ್ದು, 700ಮಂದಿ ಗಾಯಗೊಂಡಿದ್ದರು.

ಇದೀಗ ಇಂಟರ್‌ಪೋಲ್‌ಗೆ ಸಿಕ್ಕಿಬಿದ್ದಿರುವ ರಹೀಲ್ ಶೇಕ್‌‌ ಮುಂಬೈ ಸ್ಫೋಟದ ಸಂಚಿಗೆ ಆರ್ಥಿಕ ನೆರವು ನೀಡಿದ್ದ ಎಂದು ಆರೋಪಿಸಲಾಗಿದೆ.

ರಹೀಲ್ ಬಗ್ಗೆ ಅಗತ್ಯವಿರುವ ಮಾಹಿತಿಗಳನ್ನೆಲ್ಲಾ ಇಂಟರ್‌ಪೋಲ್‌ಗೆ ಒದಗಿಸಿದ್ದು ಮುಂಬೈ ಭಯೋತ್ಪಾದನಾ ನಿಗ್ರಹ ದಳ. ಶೇಕ್ ಬಗ್ಗೆ ಮಾಹಿತಿ ಬಂದ ನಂತರ ಇಂಟರ್‌ಪೋಲ್ ಶೇಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.

ಶೇಕ್‌ಗೂ ಲಷ್ಕರ್ ತೊಯ್ಬಾ ಸಂಘಟನೆಗೂ ಸಂಬಂಧ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದು, ಪಾಕಿಸ್ತಾನ ಮೂಲದ ಈ ಸಂಘಟನೆಗೆ ಹೊಸದಾಗಿ ಸೇರುವ ಉಗ್ರಗಾಮಿಗಳಿಗೆ ತರಬೇತಿ ನೀಡುವವರಲ್ಲಿ ರಹೀಲ್ ಶೇಕ್ ಕೂಡ ಒಬ್ಬ ಎನ್ನಲಾಗಿದೆ.

Share this Story:

Follow Webdunia kannada