Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ನಂತ್ರ ಗುಪ್ತಾಂಗದಲ್ಲಿ ಕಬ್ಬಿಣ ರಾಡ್ ತುರುಕಿದ ಕಾಮಾಂಧರು

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ನಂತ್ರ ಗುಪ್ತಾಂಗದಲ್ಲಿ ಕಬ್ಬಿಣ ರಾಡ್ ತುರುಕಿದ ಕಾಮಾಂಧರು
ಭೋಪಾಲ್ , ಬುಧವಾರ, 2 ಏಪ್ರಿಲ್ 2014 (15:01 IST)
ದೆಹಲಿ ಗ್ಯಾಂಗ್‌ರೇಪ್ ನೆನಪಿಸುವಂತಹ ಮತ್ತೊಂದು ಹೀನಾಯ ಘಟನೆ ಇದೀಗ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ.

33 ವರ್ಷ ವಯಸ್ಸಿನ ಮಹಿಳೆಯ ಮೇಲೆ ಐವರು ಆರೋಪಿಗಳು ಅತ್ಯಾಚಾರವೆಸಗಿ ನಂತರ ಆಕೆಯ ಗುಪ್ತಾಂಗದಲ್ಲಿ ಕಬ್ಬಿಣದ ರಾಡ್ ತುರುಕಿ ಹತ್ಯೆ ಮಾಡಿರುವ ಹೀನ ಕೃತ್ಯ ನಡೆದಿದೆ.ಮೃತ ಯುವತಿಯ ನಗ್ನ ಕೊಳೆತ ದೇಹ ಪೊದೆಗಳಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯ್ ನಗರ ಬಡಾವಣೆಯಲ್ಲಿರುವ ಆರೋಪಿಗಳು ವಾಸಿಸುತ್ತಿದ್ದ ಮನೆಯಲ್ಲಿ ಕೆಲಸದಾಳಾಗಿ ಮಹಿಳೆ ಕಾರ್ಯನಿರ್ವಹಿಸುತ್ತಿದ್ದಳು. ಆರೋಪಿಗಳು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಕೆಲಸಕ್ಕೆ ಹಾಜರಾಗಿದ್ದ ಮಹಿಳೆಯ ಮೇಲೆ ಐವರು ಆರೋಪಿಗಳು ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗದಲ್ಲಿ ಕಬ್ಬಿಣದ ರಾಡ್ ಹಾಕಿ ಹೀನಾಯವಾಗಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಅತ್ಯಾಚಾರಕ್ಕೊಳಗಾದ 33 ವರ್ಷ ವಯಸ್ಸಿನ ಮೃತ ಮಹಿಳೆ ಪಾರ್ವತಿ ಮಂಗಳವಾರದಿಂದ ಕಾಣೆಯಾಗಿದ್ದಳು. ಪತ್ನಿ ಕಾಣೆಯಾಗಿದ್ದರಿಂದ ಪತಿ ವಿಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪಾರ್ವತಿಯ ಪತಿ ಮಾತನಾಡಿ, ಪತ್ನಿ ಪ್ರತಿನಿತ್ಯ 4 ಗಂಟೆಯೊಳಗಾಗಿ ಮನೆಗೆ ಮರಳುತ್ತಿದ್ದಳು. ಆದರೆ, ರಾತ್ರಿ 8 ಗಂಟೆಯಾದ್ರೂ ಮನೆಗೆ ಮರಳದಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada