ಮಲಮಗಳ ಮೇಲೆ ಅತ್ಯಾಚಾರವೆಸಗಿ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಯತ್ನಿಸಿ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅಟೋರಿಕ್ಷಾ ಚಾಲಕನಾದ ಆರೋಪಿ ಕಳೆದ ಎರಡು ವರ್ಷಗಳಿಂದ ಮಲಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಬಾಲಕಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡುವ ಸುಳಿವು ತಿಳಿದ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಬಾಲಕಿಯ ತಾಯಿ ರೂಬಿನಾ 10 ವರ್ಷಗಳ ಹಿಂದೆ ಮೊದಲ ಪತಿ ಸಾವನ್ನಪ್ಪಿದ್ದರಿಂದ ಆರೋಪಿ ಇಕ್ಬಾಲ್ನನ್ನು ಮರುಮದುವೆಯಾಗಿದ್ದಳು. ಮದುವೆ ಸಂದರ್ಭದಲ್ಲಿ ರೂಬಿನಾಗೆ ಮೊದಲ ಪತಿಯಿಂದ 12 ವರ್ಷದ ಮಗಳಿದ್ದಳು. ಇಕ್ಬಾಲ್ನಿಂದ ಎರಡು ಹೆಣ್ಣು ಮಕ್ಕಳನ್ನು ಪಡೆದಿದ್ದಾಳೆ.
ಆರೋಪಿ ಇಕ್ಬಾಲ್ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.