Webdunia - Bharat's app for daily news and videos

Install App

ಮನೆಗೆಲಸದಾಳಿನ ಗುಪ್ತಾಂಗಕ್ಕೆ ಒದ್ದ ಬಿಎಸ್‌ಪಿ ಸಂಸದನ ಪತ್ನಿ

Webdunia
ಸೋಮವಾರ, 31 ಮಾರ್ಚ್ 2014 (18:53 IST)
ಉತ್ತರಪ್ರದೇಶದ ಬಹುಜನ ಸಮಾಜ ಪಕ್ಷದ ಸಂಸದ ಧನಂಜಯ್ ಸಿಂಗ್ ಪತ್ನಿ ಜಾಗೃತಿ ಹಲವು ಬಾರಿ ನನ್ನ ಗುಪ್ತಾಂಗವನ್ನು ಹಿಸುಕಿ ಹಿಂಸೆ ನೀಡಿದ್ದರು ಎಂದು ಮನೆಯ ಕೆಲಸದಾಳು ರಾಮ್‌ಪಾಲ್ ನ್ಯಾಯಾಲಯಕ್ಕೆ ಸ್ಫೋಟಕ ಮಾಹಿತಿ ನೀಡಿದ್ದಾನೆ.

ಸಂಸದ ಧನಂಜಯ್ ಸಿಂಗ್ ಮತ್ತು ಅವರ ಪತ್ನಿ ಮನೆಯ ಕೆಲಸದಾಳುಗಳ ಮೇಲೆ ಪ್ರತಿನಿತ್ಯ ಅಸಭ್ಯವಾಗಿ ಟೀಕಿಸುವುದಲ್ಲದೇ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ವಿವರಣೆ ನೀಡಿದ್ದಾರೆ.

ಮನೆಯ ಕೆಲಸದಾಳುಗಳು ಒಂದು ಚಿಕ್ಕ ತಪ್ಪು ಮಾಡಿದರೂ ಜಾಗೃತಿ ಸಿಂಗ್ ದೈಹಿಕವಾಗಿ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ದಾಖಲಿಸಿದ್ದಾರೆ.

ರಾಮ್‌ಪಾಲ್ , ಮೀನಾ ಮತ್ತು ರಾಖಿಯನ್ನು ಪಶ್ಚಿಮ ಬಂಗಾಳದ ಪರಗಣಾಸ್ ಜಿಲ್ಲೆಯಿಂದ ಮನೆಗೆಲಸಕ್ಕಾಗಿ ಕರೆತಂದ ದೇವ್ ಕುಮಾರ್ ಎನ್ನುವ ವ್ಯಕ್ತಿಯ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಸಂಸದ ಧನಂಜಯ್ ಸಿಂಗ್ ಉತ್ತರಪ್ರದೇಶದ ಜೌನ್‌ಪುರ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರ ಪತ್ನಿ ಜಾಗೃತಿ ಸಿಂಗ್ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಹಿರಿಯ ಹಲ್ಲಿನ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮಂಗಳವಾರದಂದು ಮನೆಗೆಲಸದಾಳು ರಾಖಿ ಹತ್ಯೆಯ ಆರೋಪದ ಮೇಲೆ ಜೈಲಿನಲ್ಲಿ ಬಂಧಿತರಾಗಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments