Select Your Language

Notifications

webdunia
webdunia
webdunia
webdunia

ಬಿಜೆಪಿ ಹಿರಿಯ ನಾಯಕರ ತೇಜೋವಧೆ ಮಾಡಿದ ಮೋದಿಗೆ ಕಾಂಗ್ರೆಸ್‌ಗೆ ಪಾಠ ಹೇಳುವ ನೈತಿಕತೆಯಿಲ್ಲ: ಕಾಂಗ್ರೆಸ್

ಬಿಜೆಪಿ ಹಿರಿಯ ನಾಯಕರ ತೇಜೋವಧೆ ಮಾಡಿದ ಮೋದಿಗೆ ಕಾಂಗ್ರೆಸ್‌ಗೆ ಪಾಠ ಹೇಳುವ ನೈತಿಕತೆಯಿಲ್ಲ: ಕಾಂಗ್ರೆಸ್
ಕೋಲಕತ್ತಾ , ಶುಕ್ರವಾರ, 7 ಫೆಬ್ರವರಿ 2014 (14:20 IST)
PTI
ನವದೆಹಲಿ: ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ ಮತ್ತು ಕೇಶುಭಾಯಿ ಪಟೇಲ್‌ರನ್ನೇ ಟೀಕಿಸಿದ್ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಕಾಂಗ್ರೆಸ್‌ಗೆ ಉಪದೇಶ ನೀಡುವ ನೈತಿಕತೆಯಿಲ್ಲ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಅನುಭವಿ ಪ್ರಣಬ್ ಮುಖರ್ಜಿಯವರಿಗೆ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ಕೊಡುಗೆಯಾಗಿ ನೀಡಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಕೋಲಕತ್ತಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ, ಕಾಂಗ್ರೆಸ್ ಪಕ್ಷ ಸ್ಥಳೀಯ ನಾಯಕರಾದ ಪ್ರಣವ್ ಮುಖರ್ಜಿ ಅವರನ್ನು ಪ್ರಧಾನಮಂತ್ರಿ ಮಾಡಲು ಎರಡು ಸಲ ನಿರಾಕರಿಸಿತ್ತು ಎಂದು ವಾಗ್ದಾಳಿ ನಡೆಸಿದ್ದರು.

ರಾಷ್ಟಪ್ರತಿಯಂತಹ ಉನ್ನತ ಪದವಿಯ ವ್ಯಕ್ತಿಯನ್ನು ಮೋದಿ ರಸ್ತೆ ರಾಜಕಾರಣಕ್ಕೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಮುಖರ್ಜಿ ಅನುಭವಿ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಅವರ ಪಾಂಡಿತ್ಯ ಮತ್ತು ಆಡಳಿತಾತ್ಮಕ ಕುಶಾಗ್ರತೆಯಿಂದ ಶ್ರೀಮಂತವಾಗಿದೆ ಎಂದು ಹೇಳಿದೆ.

ಮುಖರ್ಜಿ ದಶಕಗಳ ಕಾಲ ಕಾಂಗ್ರೆಸ್ ನ ವಿವಿಧ ಹುದ್ದೆಗಳ ನೇತೃತ್ವ ವಹಿಸಿದ್ದಾರೆ. ಆದರೆ ಮೋದಿ ಹೇಳಿದ ಮಾತುಗಳಿಂದ ಅವರ ಮನಸ್ಥಿತಿ ಎಂತಹದೆಂದು ಅರ್ಥವಾಗುತ್ತದೆ. ಕೇಶುಭಾಯಿ ಪಟೇಲ್ ಗುಜರಾತ್ ನಲ್ಲಿ ಬಿಜೆಪಿಯ ಹಿರಿಯ ನಾಯಕರಾಗಿದ್ದರೂ ಕೂಡ ಮೋದಿ ಅವರನ್ನು ಅಪಮಾನಿಸಿದ್ದಲ್ಲದೇ ಪಕ್ಷದಿಂದ ಕಿತ್ತೊಗೆದಿದ್ದಾರೆ. ಮೋದಿ ಹಿರಿಯರಿಗೆ ಹೇಗೆ ಆದರ ತೋರಿಸುತ್ತಾರೆ ಎಂಬುದು ಅಡ್ವಾಣಿ ಜತೆಗಿನ ಅವರ ವರ್ತನೆಯಿಂದ ವೇದ್ಯವಾಗುತ್ತದೆ. ಮೋದಿ ಮತ್ತು ಇತರರ ಅಂಕೆ ಇಲ್ಲದ ವರ್ತನೆಯ ಕಾರಣದಿಂದ ಬಿಜೆಪಿ ಹಿರಿಯ ಅಡ್ವಾಣಿ ಪಕ್ಷದ ಎಲ್ಲ ಹುದ್ದೆಗಳನ್ನು ತ್ಯಜಿಸಿದ್ದಾರೆ ಎಂದು ಎಐಸಿಸಿ ವಕ್ತಾರರಾದ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಹಿರಿಯರನ್ನು ಹೇಗೆ ಗೌರವಿಸಬೇಕು ಎಂದು ಭೋಧನೆ ಮಾಡುವ ಮೊದಲು ಮೋದಿ ತನ್ನ ಅಂತರಾಳವನ್ನು ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ಕಿಡಿಕಾರಿದೆ.

Share this Story:

Follow Webdunia kannada