Select Your Language

Notifications

webdunia
webdunia
webdunia
webdunia

ನಿತೀಶ್‌ ಕುಮಾರ್‌ ಒಬ್ಬ ಹುಚ್ಚ ಎಂದು ಜರಿದ ಬಿಜೆಪಿ

ನಿತೀಶ್‌ ಕುಮಾರ್‌ ಒಬ್ಬ ಹುಚ್ಚ ಎಂದು ಜರಿದ ಬಿಜೆಪಿ
ನವದೆಹಲಿ , ಬುಧವಾರ, 30 ಅಕ್ಟೋಬರ್ 2013 (17:36 IST)
PTI
PTI
ನರೇಂದ್ರ ಮೋದಿಯನ್ನು ಹಿಟ್ಲರ್‌ ಎಂದು ಕರೆದಿರುವ ಜೆಡಿಯು ಮುಖ್ಯಸ್ಥರಾಗಿರುವ ನಿತೀಶ್‌ ಕುಮಾರ್‌ ಒಬ್ಬ ಹುಚ್ಚ ಎಂದು ಬಿಜೆಪಿ ಹೇಳಿದೆ. ಈ ಮೂಲಕ ನಿತೀಶ್‌ ಕುಮಾರ್‌ ಮತ್ತು ನರೇಂದ್ರ ಮೋದಿಯವರ ನಡುವಿನ ವಾಗ್ಯುದ್ಧಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.

ಪಾಟ್ನಾ ರ‍್ಯಾಲಿಯ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿ "ನಿತೀಶ್‌ ಕುಮಾರ್‌ ಬೆನ್ನಿಗೆ ಚೂರಿ ಹಾಕುವ ಅವಕಾಶವಾದಿ. ಬಿಜೆಪಿ ಪಕ್ಷದಲ್ಲಿ ಬೆಳೆದು ಇದೀಗ ಪ್ರಧಾನಿ ಆಸೆಗಾಗಿ ಪಕ್ಷ ತೊರೆದು ಓಡಿ ಹೋಗಿದ್ದಾರೆ" ಎಂದು ನಿತೀಶ್ ಕುಮಾರ್‌ ವಿರುದ್ಧ ಹರಿ ಹಾಯ್ದರು.

ಎರಡು ದಿನಗಳ ನಂತರ ಇದಕ್ಕೆ ಪ್ರತಿಕ್ರಿಯಿಸಿದ ನಿತೀಶ್‌ ಕುಮಾರ್‌ " ನರೇಂದ್ರ ಮೋದಿ ಹಿಟ್ಲರ್‌ ಇದ್ದಂತೆ.. ಸರ್ವಾಧಿಕಾರಿ ಧೋರಣೆಯನ್ನು ಹೊಂದಿದ್ದಾರೆ" ಎಂದು ಮೋದಿಗೆ ತಿರುಗೇಟು ನೀಡಿದ್ರು. ಇದೀಗ ನಿತೀಶ್ ಕುಮಾರ‍್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಜೆಪಿ "ನಿತೀಶ್‌ ಕುಮಾರ್‌ ಒಬ್ಬ ಹುಚ್ಚ. ಹೀಗಾಗಿ ಏನೇನೋ ಮಾತಾಡ್ತಿದ್ದಾರೆ. ಅವರು ಏಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಅವರಿಗೇ ಗೊತ್ತಿಲ್ಲ. ಹೀಗಿರುವಾಗ ಅವರ ಮಾತಿಗೆ ಅಷ್ಟೋಂದು ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ವರಿಷ್ಟ ರವಿಶಂಕರ‍್ ಪ್ರಸಾದ್‌ ಕಿಕ್ ಬ್ಯಾಕ್ ಕೊಟ್ಟಿದ್ದಾರೆ.

Share this Story:

Follow Webdunia kannada