ಡೆಹರಾಡೂನ್ ಎಕ್ಸ್ಪ್ರೆಸ್ನಲ್ಲಿ ಬೆಂಕಿ, 9 ಜನರ ಸಾವು
ಘೋಡವಲ್ , ಬುಧವಾರ, 8 ಜನವರಿ 2014 (11:07 IST)
ಮುಂಬೈನಿಂದ ಡೆಹರಾಡೂನ್ಗೆ ಹೊಗುತ್ತಿರುವ ಡೆಹರಾಡೂನ್ಗೆ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಹತ್ತಿಕೊಂಡಿದೆ. ಮಹಾರಾಷ್ಟ್ರದ ಘೋಡವಲ್ ನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 9 ಜನರು ಸಾವನ್ನಪ್ಪಿದ್ದಾರೆ ಮತ್ತು ಕೆಲವು ಜನರು ಗಾಯಾಳುಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ . ಮೂಲಗಳ ಪ್ರಕಾರ S2, S3, S4 ರೈಲು ಡಬ್ಬಿಗಳಲ್ಲಿ ಬೆಳಿಗ್ಗೆ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಬೆಂಕಿ ಯಾವ ಕಾರಣಕ್ಕೆ ಕಾಣಿಸಿಕೊಂಡಿದೆ ಎಂದು ಇನ್ನು ತಿಳಿದಿಲ್ಲ . ನಸುಕಿನ ಜಾವದಲ್ಲಿ ಸಾಕಷ್ಟು ಜನರು ನಿದ್ರೆಯಲ್ಲಿದ್ದರು ಎನ್ನಲಾಗಿದೆ. ಇದರಿಂದ ಹೆಚ್ಚಿನ ಜನರಿಗೆ ಗಾಯಗಳಾಗಿವೆ.. ರೈಲಿನಲ್ಲಿರುವ ಎಲ್ಲಾ ಜನರನ್ನು ಹೊರಗಡೆ ಕಳುಹಿಸಿದ ಬಳಿಕ ಅಗ್ನಿ ಶಾಮಕ ದಳದವರು ಮತ್ತು ರಕ್ಷಣಾ ಪಡೆಯವರು ಬೆಂಕಿ ಆರಿಸಲು ಹರಸಾಹಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.