Select Your Language

Notifications

webdunia
webdunia
webdunia
webdunia

ಚಿಕ್ಕಮಗಳೂರು: ರಾಹುಲ್ ಅಥವಾ ಪ್ರಿಯಾಂಕ ಸ್ಪರ್ಧೆ ಸಾಧ್ಯತೆ

ಚಿಕ್ಕಮಗಳೂರು: ರಾಹುಲ್ ಅಥವಾ ಪ್ರಿಯಾಂಕ ಸ್ಪರ್ಧೆ ಸಾಧ್ಯತೆ
, ಗುರುವಾರ, 8 ಆಗಸ್ಟ್ 2013 (19:12 IST)
PR
PR
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಅವರನ್ನು ಅವರ ಅಜ್ಜಿ ಇಂದಿರಾಗಾಂಧಿ ನಿಂತಿದ್ದ ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ. ಗಾಂಧಿ ಕುಟುಂಬದ ಕುಡಿಯನ್ನು ಚಿಕ್ಕಮಗಳೂರಿನಲ್ಲಿ ಕಣಕ್ಕಿಳಿಸಲು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಚರ್ಚೆ ನಡೆದಿದೆಯೆಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆಗೆ ಏರಿದ್ದು, ಗಾಂಧಿ ಕುಟುಂಬದ ಕುಡಿಯನ್ನು ರಾಜ್ಯದ ಕ್ಷೇತ್ರದಲ್ಲಿ ನಿಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಬೇರೂರುವಂತೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಕಾಂಗ್ರೆಸ್‌ನಲ್ಲಿ ನೆಹರು ನಂತರ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಪ್ರಧಾನಿಯಾಗುವ ಮೂಲಕ ವಂಶಪಾರಂಪರ್ಯ ಆಡಳಿತ ಎಂಬ ಟೀಕೆಗೆ ಗುರಿಯಾಗಿತ್ತು.

ರಾಜೀವ್ ಗಾಂಧಿ ನಿಧನದ ನಂತರ ಸೋನಿಯಾ ಸೋನಿಯಾ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟನೀಡಿ ವಿವಾದದಿಂದ ದೂರ ಉಳಿದರು. ಈಗ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಬಿಂಬಿಸಬೇಕೆಂಬ ಕೂಗು ಕಾಂಗ್ರೆಸ್‌ನ ಒಂದು ವಲಯದಿಂದ ಕೇಳಿಬರುತ್ತಿದೆ.

Share this Story:

Follow Webdunia kannada